ಕಾರವಾರ: ಅನೇಕ ದೇಶಗಳಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದೇಶಗಳಿಂದ ವಿಮಾನ ನಿಲ್ದಾಣ ಹಾಗೂ ಬಂದರು ಮೂಲಕ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ ಕೊರೋನಾ ಪರಿಷ್ಕೃತ ನೂತನ ಮಾರ್ಗಸೂಚಿ ಪ್ರಕಟಿಸಿದ್ದು, ಎ-ಕೆಟಗರಿಯಲ್ಲಿರುವ 99 ದೇಶಗಳಿಂದ ಬರುವವರಿಗೆ ಎರಡೂಡೋಸ್ ಲಸಿಕೆ ಪಡೆದಿದ್ದರೆ ಕ್ವಾರಂಟೈನ್‍ನಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ.
ಹೆಚ್ಚು ಅಪಾಯಕಾರಿ ಎಂದು ಗುರುತಿಸಿರುವ ಯೂರೋಪ್ ರಾಷ್ಟ್ರಗಳು, ದಕ್ಷಿಣಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೊಟ್ಸಾವನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್ ದೇಶಗಳಿಂದ ಬರುವವರು ಆಗಮಿಸುವ ಮೊದಲೂ 72 ಗಂಟೆಗಳಿಗಿಂತ ಹಳೆಯ ಆರ್‍ಟಿ-ಪಿಸಿಆರ್ ನೆಗೆಟಿವ್ ವರದಿ ಅಪ್‍ಲೋಡ್ ಮಾಡಬೇಕು. ಜತೆಗೆರಾಜ್ಯಕ್ಕೆ ಆಗಮಿಸಿದ ಬಳಿಕವೂ ಮತ್ತೊಮ್ಮೆ ಪರೀಕ್ಷೆಗೆ ಒಳಪಡಬೇಕು. ನೆಗೆಟಿವ್ ಬಂದರೂ 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನ್‍ಗೆ ಒಳಪಡಬೇಕು. 8ನೇ ದಿನ ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಬೇಕು.
ಭಾರತದಜೊತೆಗೆ ಲಸಿಕೆ ಒಡಂಬಡಿಕೆ ಮಾಡಿಕೊಂಡಿರುವ ದೇಶಗಳಿಗೆ ಕೆಲ ವಿನಾಯಿತಿಗಳನ್ನು ನೀಡಲಾಗಿದೆ. ಎ-ಕೆಟಗರಿಯಲ್ಲಿದ್ದಇಂತಹ ದೇಶಗಳ ಪಟ್ಟಿಯನ್ನು 11 ರಿಂದ 99ಕ್ಕೆ ಏರಿಕೆ ಮಾಡಲಾಗಿದೆ. ಸಿಂಗಾಪೂರ್ ಹಾಗೂ ಜಿಂಬಾಂಬ್ವೆ ದೇಶಗಳನ್ನು ಹೈ-ರಿಸ್ಕ್ ಪಟ್ಟಿಯಿಂದತೆಗೆದು ಎ-ಕೆಟಗರಿಗೆ ಸೇರಿಸಲಾಗಿದೆ. ಇಸ್ರೆಲ್, ಆಸ್ಪ್ರೇಲಿಯಾ, ಫ್ರಾನ್ಸ್, ಈಜಿಪ್ಟ್ ಸೇರಿದಂತೆ 99 ದೇಶಗಳಿಂದ ಬರುವವರುಡಬ್ಲ್ಯೂಎಚ್‍ಒಅನುಮೋದನೆ ಪಡೆದಿರುವಎರಡೂಡೋಸ್ ಲಸಿಕೆ ಪಡೆದಿದ್ದರೆಕಡ್ಡಾಯ ಹೋಂ ಕ್ವಾರಂಟೈನ್‍ಗೆ ಒಳಪಡುವ ಅಗತ್ಯವಿಲ್ಲ. ಇವರು 72 ಗಂಟೆ ಹಳೆಯದಲ್ಲದ ನೆಗೆಟಿವ್ ವರದಿ ನೀಡಿ ಸ್ವಯಂ ನಿಗಾದಲ್ಲಿದ್ದಾರೆ ಸಾಕು ಎಂದು ಸ್ಪಷ್ಟಪಡಿಸಲಾಗಿದೆ.
ಉಳಿದಂತೆ ಲಸಿಕೆ ಪಡೆಯದ ಹಾಗೂ ಒಂದುಡೋಸ್ ಮಾತ್ರ ಪಡೆದಿರುವವರುಏರ್‍ಪೆÇೀರ್ಟ್‍ಗೆ ಬಂದ ಬಳಿಕ ಮತ್ತೊಮ್ಮೆ ಪರೀಕ್ಷೆಗೆ ಒಳಪಡಬೇಕು. ಬಳಿಕ ಬಳಿಕ 7 ದಿನ ಹೋಂ ಕ್ವಾರಂಟೈನ್‍ಲ್ಲಿದ್ದುಎಂಟನೇ ದಿನ ಮರು ಪರೀಕ್ಷೆಗೆ ಒಳಪಡಬೇಕು. ಈ ವೇಳೆ ನೆಗೆಟಿವ್ ಬಂದರೂ ಮತ್ತೆ 7 ದಿನಗಳ ಕಾಲ ಕ್ವಾರಂಟೈನ್‍ನಲ್ಲಿಇರಬೇಕುಎಂದು ತಿಳಿಸಲಾಗಿದೆ. ದೇಶಕ್ಕೆ ಆಗಮಿಸುವ ಎಲ್ಲ ದೇಶಗಳ ಪ್ರಯಾಣಿಕರುಏರ್ ಸುವಿಧ ಪೆÇೀರ್ಟಲ್‍ನಲ್ಲಿ 72 ಗಂಟೆಗಿಂತ ಹಳೆಯದಲ್ಲದ ನೆಗೆಟಿವ್ ವರದಿ ಅಪ್‍ಲೋಡ್ ಮಾಡಬೇಕು. ಜತೆಗೆ ನೆಲದ ಕಾನೂನಿಗೆ ತಕ್ಕಂತೆ ನಡೆದುಕೊಳ್ಳುವುದಾಗಿ ಸ್ವಯಂಘೋಷಣಾ ಪತ್ರಅಪ್‍ಲೋಡ್ ಮಾಡಬೇಕು.
ರಾಜ್ಯಕ್ಕೆ ಆಗಮಿಸುವ ವೇಳೆ ಥರ್ಮಲ್ ಸ್ಕ್ರೀನಿಂಗ್‍ನಲ್ಲಿ ರೋಗ ಲಕ್ಷಣಗಳು ಪತ್ತೆಯಾದರೆಯಾವದೇಶದಿಂದ ಬಂದಿದ್ದರೂ ಪರೀಕ್ಷೆ ಮಾಡಿಕ್ವಾರಂಟೈನ್ ವಿಧಿಸಲಾಗುವುದು. ರೋಗ ಲಕ್ಷಣಇಲ್ಲದಿದ್ದರೆ ಸ್ವಯಂ ನಿಗಾದಲ್ಲಿರಲು ಸೂಚಿಸಲಾಗುವುದುಎಂದುಆದೇಶದಲ್ಲಿ ತಿಳಿಸಲಾಗಿದೆ. ಇನ್ನು 5 ವರ್ಷಕ್ಕಿಂತಕಡಿಮೆ ವಯಸ್ಸಿನ ಮಕ್ಕಳಿಗೆ ಕ್ವಾರಂಟೈನ್‍ನಿಂದ ವಿನಾಯಿತಿ ನೀಡಲಾಗಿದೆ.