ಅಂಕೋಲಾ: ಕೆ.ಎಲ್.ಇ ಸಂಸ್ಥೆಯು ಮಕ್ಕಳಿಗೆ ಉತ್ತಮ, ಗುಣಾತ್ಮಕ ಶಿಕ್ಷಣ ನೀಡುತಾ ಎಷ್ಯಾದಲ್ಲಿಯೇ ದೊಡ್ಡ ಸಂಸ್ಥೆಯಾಗಿ ಬೆಳೆಯುತ್ತಿದೆ ಎಂದು ಕೆ.ಎಲ್.ಇ ಸಂಸ್ಥೆಯ ಕಾರ್ಯದರ್ಶಿ ಡಾ. ಡಿ.ಎಲ್.ಭಟ್ಕಳ ಹೇಳಿದರು.
ಅವರು ಪಟ್ಟಣದ ಕೆ.ಎಲ್.ಇ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ, ವಿದ್ಯಾರ್ಥಿ ಒಕ್ಕೂಟ ಹಾಗೂ ಎನ್.ಎಸ್.ಎಸ್ ಘಟಕವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಉದ್ಯೋಗ, ಶಿಕ್ಷಣ, ವೈದ್ಯಕೀಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಶ್ರೇಷ್ಠ ತರಬೇತಿ ನೀಡಲಾಗುತ್ತದೆ, ಪ್ರತಿಯೊಬ್ಬ ಪಡೆದ ಶಿಕ್ಷಣ ಕೇವಲ ಉದ್ಯೋಗಕ್ಕಾಗಿ ಪ್ರಯತ್ನ ಪಡದೆ ಉದ್ಯೋಗ ಕಂಪನಿಗಳನ್ನು ಕಟ್ಟಬಹುದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಪ್ರಯತ್ನ ಅಗತ್ಯ. ಆದ್ದರಿಂದ ಸ್ವಂತ ಪ್ರಯತ್ನ ಸರ್ವತೋಮುಖ ಯಶಸ್ಸಿಗೆ ಕಾರಣವಾಗುತ್ತದೆ ಎಂದು ಹೇಳಿದರು.
ಕೆ.ಎಲ್.ಇ ಸಂಸ್ಥೆಯನ್ನು ಸಮಗ್ರವಾಗಿ ಪರಿಚಯಿಸಿದ ಪ್ರಾಚಾರ್ಯೆ ನಾಗಮ್ಮಾ ಜಿ ಮಮದಾಪೂರ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಮೇಧಾ ಶೆಟ್ಟಿ, ಭಾರ್ಗವಿ ನಾಯಕ, ವಿನುತಾ ಅಂಕೋಲೆಕರ, ಗದಿಗಯ್ಯ ಚಿಕ್ಕನಮಠ, ಸಾತ್ವಿಕ ನಾಯಕ, ಚೇತನ ರಾಠೋಡ, ಅಂಕಿತಾ ಗುನಗಾ, ಅಲ್ಪಿಯಾ ಸೈಯದ್, ಮೂಲಭೂತ ಸೌಕರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ವಾತಿ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ಅಶ್ವಥನಾರಾಯಣ ಹೆಗಡೆ ಸ್ವಾಗತಿಸಿ, ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳಿಗೆ ಮತ್ತು ಎನ್.ಎಸ್.ಎಸ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಉಪನ್ಯಾಸಕಿ ವಿದ್ಯಾ ತಾಂಡೇಲ್ ವಂದಿಸಿದರು. ಉಪನ್ಯಾಸಕಿ ಕಲ್ಪನಾ ಗೌಡ ನಿರೂಪಿಸಿದರು.