ಕಾರವಾರ: ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರ ಅಂತಿಮದಿನವಾಗಿದ್ದರೂ, ಕಾಂಗ್ರೆಸ್ ಇನ್ನೂ ಅಧಿಕೃತವಾಗಿ ತನ್ನ ಅಭ್ಯರ್ಥಿಗಳ ಪಟ್ಟಿ ನೀಡಿಲ್ಲ.
ಸೋಮವಾರ ಮಧ್ಯಾಹ್ನದ ವೇಳೆಗೆ ಜಿಲ್ಲೆಯಲ್ಲಿ ಭೀಮಣ್ಣ ನಾಯ್ಕ ಸ್ಪರ್ಧೆ ಖಚಿತ ಎಂದು ಪಕ್ಷದ ಆಂತರಿಕ ಮೂಲಗಳು ದೃಢಪಡಿಸಿತ್ತು. ‘e – ಉತ್ತರ ಕನ್ನಡ’ ಸಹ, ಭೀಮಣ್ಣ ನಾಯ್ಕನೇ ಅಭ್ಯರ್ಥಿ ಎಂದು ಸುದ್ದಿ ಪ್ರಕಟಿಸಿತ್ತು. ಆದರೆ ನಂತರದ ಸಮಯದಲ್ಲಿ ಕರಾವಳಿಯ ಸಾಯಿ ಗಾಂವ್ಕರ್ ಕಾಂಗ್ರೆಸ್ ಅಭ್ಯರ್ಥಿ ಎಂದು ರಾಜ್ಯ ಮಾದ್ಯಮಗಳು ವರದಿ ಮಾಡಿದ್ದವು.
ಪಕ್ಷದಿಂದ ಅಂತಿಮವಾಗಿ ಸಂಜೆ 4 ಘಂಟೆಗೆ ಅಭ್ಯರ್ಥಿ ಘೋಷಣೆ ಮಾಡಲಾಗುವುದು ಎಂಬ ಖಚಿತ ಮಾಹಿತಿ ದೊರಕಿತ್ತು. ಆದರೆ ರಾಜ್ಯ ಕಾಂಗ್ರೆಸ್ ಸಮಿತಿ ಅಭ್ಯರ್ಥಿ ಪ್ರಕಟಿಸಲು ಮೀನ-ಮೇಷ ಎಣಿಸುತ್ತಿರುವುದು ಪಕ್ಷ ಕಾರ್ಯಕರ್ತರಲ್ಲಿಯೇ ಅಸಮಧಾನಕ್ಕೆ ಕಾರಣವಾಗಿದೆ.
ಸೋಮವಾರ ಸಂಜೆ 7.30 ರ ಒಳಗೆ ಅಂತಿಮವಾಗಿ ಅಭ್ಯರ್ಥಿ ಘೋಷಣೆ ಮಾಡುವ ಸಾಧ್ಯತೆ ಇದೆಯೆಂದು ತಿಳಿದುಬಂದಿದೆ.