• first
    second
    third
    previous arrow
    next arrow
  • ಗಗನಕ್ಕೇರುತ್ತಿದೆ ತರಕಾರಿ ದರ

    300x250 AD

    ಕಾರವಾರ: ಎಲ್ಲೆಡೆ ಸುರಿಯುತ್ತಿರುವ ಏಕಾಏಕಿ ಮಳೆಯಿಂದಾಗಿ ರೈತರ ಗೋಳು ಹೇಳ ತೀರದಾಗಿದೆ. ರೈತರ ಬೆಳೆಗಲೆಲ್ಲ ನೀರಲ್ಲಿ ಕೊಳೆತು,ಮುಳುಗಿ ಹೋಗಿ ಕೈಗೆ ಬಂದದ್ದು ಬಾಯಿಗಿಲ್ಲ ಎಂಬಂತಾಗಿದೆ. ಇತ್ತ ಬೆಲೆ ಏರಿಕೆಯಿಂದಾಗಿ ಗ್ರಾಹಕರ ಜೇಬು ಬರಿದಾಗುತ್ತಿದೆ.

    ಇದೇ ಮೊದಲ ಬಾರಿಗೆ ನಗರದ ರವಿವಾರದ ಮಾರುಕಟ್ಟೆಯಲ್ಲಿ ಬದನೆಕಾಯಿ, ಟೊಮೇಟೊ ಸೇರಿದಂತೆ ಹಲವು ತರಕಾರಿಗಳು ನೂರರ ಗಡಿ ತಲುಪಿದ್ದು, ಗ್ರಾಹಕರಿಗೆ ಇದರ ಬಿಸಿ ಮುಟ್ಟಿದೆ. ಮುಂದಿನ ಒಂದು ತಿಂಗಳ ಕಾಲ ಇದೇ ರೀತಿ ಬೆಲೆ ಏರಿಕೆ ಮುಂದುವರೆಯಲಿದ್ದು, ಸಾಮಾನ್ಯ ಜನತೆಗೆ ಕಷ್ಟವಾಗಿದೆ.

    ಈರುಳ್ಳಿ ಮತ್ತಷ್ಟು ಏರುವ ಸಾಧ್ಯತೆ: ಅಕಾಲಿಕ ಮಳೆಯ ಪರಿಣಾಮ ಈರುಳ್ಳಿ ಮಳೆಯಲ್ಲಿ ನೆನೆದು ಒಳ ಪದರಗಳು ಮತ್ತು ಬುಡ ಕೊಳೆಯಲಾರಂಭಿಸಿದೆ. ಪ್ರಸ್ತುತ ಈರುಳ್ಳಿ ಬೆಲೆ 100 ರೂ. ತಲುಪಿದೆ. ಮಳೆ ಪರಿಸ್ಥಿತಿ ಇದೇರೀತಿ ಮುಂದುವರೆದರೆ ಬೆಲೆ ಮತ್ತಷು ್ಟಏರಿಕೆಯಾಗಲಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

    300x250 AD

    ತರಕಾರಿದರ (ಕೆ.ಜಿ.ಗೆ ರೂ.ಗಳಲ್ಲಿ): ಬೀನ್ಸ್ -60, ಬಿಳಿ ಬದನೆಕಾಯಿ -80, ಬಜ್ಜಿ ಮೆಣಸಿನಕಾಯಿ -60, ಟೊಮೇಟೊ -100, ಕ್ಯಾರೆಟ್ -60-70, ಬೆಂಡೆಕಾಯಿ -70, ಮೂಲಂಗಿ -60

    ಸೊಪ್ಪುಗಳು ಒಂದು ಕಟ್ಟಿಗೆ: ಮೆಂತ್ಯ ಸೊಪ್ಪು -20, ಪಾಲಾಕ್ ಸೊಪ್ಪು -50

    Share This
    300x250 AD
    300x250 AD
    300x250 AD
    Back to top