ಕಾರವಾರ: ಹಂಗರ ರಿಲೀಫ್ ಕಾರ್ಯಕ್ರಮದಡಿಯಲ್ಲಿ ಅಸ್ನೋಟಿ ಶಿವಾಜಿ ವಿದ್ಯಾ ಮಂದಿರ ಶಾಲೆಗೆ ಸೀ ಸೈಡ್ ರೋಟರಿ ಕ್ಲಬ್ ಕಾರವಾರ ಹಾಗೂ ಲಾಯನ್ಸ್ ಕ್ಲಬ್ ಕಾರವಾರ ವತಿಯಿಂದ ಮಕ್ಕಳ ಊಟದ ಸಲುವಾಗಿ 300 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಾಧ್ಯಾಪಕ ದಿನೇಶ ಗಾಂವಕರ, ಪ್ರಾಧ್ಯಾಪಕ ಗಣೇಶ ಬಿಷ್ಠಣ್ಣವರ, ಲಾಯನ್ಸ್ ಅಧ್ಯಕ್ಷೆ ಲಾ. ಐಶ್ವರ್ಯ ಮಾಸೂರಕರ, ರೋಟರಿ ಅಧ್ಯಕ್ಷೆ ರೊ. ದೀಪಾ ಪೈ, ಸೆಕ್ರೆಟರಿ ರೊ. ಅನು ಜಯಪ್ರಕಾಶ, ಲಾ. ಅನಿರುದ್ಧ ಹಳದಿಪುರ, ರೊ. ಕೃಷ್ಣಾನಂದ ಕೊಲ್ವೆಕರ, ರೊ. ಬಿ.ಎಸ್‍ಪೈ, ಲಾ. ಇಬ್ರಾಹಿಮ ಕಲ್ಲೂರ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.