ಶಿರಸಿ:ಶಿರಸಿಯ ಅಜಿತ ಮನೋಚೇತನಾ ವಿಕಾಸ ಶಾಲೆಯ ಮಕ್ಕಳು ಮಂಗಳೂರಿನಲ್ಲಿ ನ. 13-14 ರಂದು ನಡೆದ ಸ್ಪೆಷಲ್ ಒಲಂಪಿಕ್ ರಾಜ್ಯ ಮಟ್ಟದ ಪಂದ್ಯಾವಳಿಗಳಲ್ಲಿ ಪಾಲ್ಗೊಂಡರು.
ಮಂಗಳಾದೇವಿ ಕ್ರೀಡಾಂಗಣದಲ್ಲಿ ನಡೆದ ವಿವಿಧ ಸ್ಪರ್ಧೆ, ತರಬೇತಿಗಳಲ್ಲಿ ಪಾಲ್ಗೊಂಡರು ಸಾಲ್ವಿನ್ ಡಿಸೋಜಾ ಪುಟ್ಬಾಲ್ ನಲ್ಲಿ ಹಾಗೂ ಸೈಕ್ಲಿಂಗ್ ವಿಭಾಗದಲ್ಲಿ ಅಫ್ತಾಬ್ ಸನಾವುಲ್ಲ ಇಮ್ಮು ಸಾಬ್ ವಿಶೇಷ ಸಾಧನೆ ತೋರಿದರು. ಸಾಲ್ವಿನ್ ರಾಷ್ಟ್ರಮಟ್ಟದ ಸ್ಪೆಷಲ್ ಒಲಿಂಪಿಕ್‍ಗೆ ಆಯ್ಕೆ ಆಗಿದ್ದು ಫೆಬ್ರುವರಿಯಲ್ಲಿ ಬಿಹಾರದಲ್ಲಿ ರಾಷ್ಟ್ರಮಟ್ಟದ ಪಂದ್ಯಾವಳಿ ನಡೆಯಲಿದೆ.
ವಿಕಾಸ ಶಾಲಾ ಶಿಕ್ಷಕಿಯರಾದ ಸುಮಿತ್ರಾ ಮರಾಠಿ, ಗೀತಾ ಗೌಡ ಅವರು ತರಬೇತಿದಾರರಾಗಿ ಪಾಲ್ಗೊಂಡಿದ್ದರು. ವಿಶೇಷ ಮಕ್ಕಳ ಸಾಧನೆಗೆ ಅಜಿತ ಮನೋಚೇತನದ ಅಧ್ಯಕ್ಷ ಸುಧೀರ ಭಟ್ ಹಾಗೂ ಕಾರ್ಯದರ್ಶಿಅನಂತ ಹೆಗಡೆ ಅಶೀಸರ, ಮುಖ್ಯ ಶಿಕ್ಷಕಿ ನರ್ಮದಾ ಹೆಗಡೆ ಅಭಿನಂದನೆ ಹೇಳಿದ್ದಾರೆ.