ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾದ ಅಘನಾಶಿನಿ ಸಾಂಬಾರು ಬೆಳೆಗಳ ಉತ್ಪಾದಕರ ಕಂಪನಿಯ ಸರ್ವ ಸದಸ್ಯರಸಭೆ ಶನಿವಾರ ಹಾರ್ಸಿಕಟ್ಟಾದಲ್ಲಿ ನಡೆಯಿತು.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಹೆಗಡೆ ಕುಂಬಾರಕುಳಿ ಮಾತನಾಡಿ ಕಂಪನಿ ಸದಸ್ಯರ ಅನುಕೂಲಕ್ಕಾಗಿ ಕಂಪನಿಯ ಬ್ರಾಂಡ್‍ನಲ್ಲಿ ಸಾವಯವ ಗೊಬ್ಬರ ಬಿಡುಗಡೆ ಮಾಡಿದ್ದು ಇದ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಹಿಟ್ಟಿನ ಗಿರಿಣಿ ಕಾರ್ಯಾರಂಭ ಮಾಡಿದ್ದು ಕೆಲವೆ ದಿನದಲ್ಲಿ ಎಣ್ಣೆ ಗಿರಣಿ ಘಟಕ ಕಾರ್ಯ ಆರಂಭಿಸಲಿದೆ. ಈಗಾಗಲೇ ಸ್ಪೈಸ್ ಪಾರ್ಕ ನಿರ್ಮಾಣ ಮಾಡಿದೆ. ಕೃಷಿ ಇಲಾಖೆಯ ಸಹಾಯದಿಂದ ಯಂತ್ರೋಪಕರಣ ಖರೀದಿಸಿದೆ.
ಕಂಪನಿ 2020-21ನೇಸಾಲಿನಲ್ಲಿ 56 ಲಕ್ಷದ 42ಸಾವಿರದ 705ರೂಗಳ ವ್ಯವಹಾರ ನಡೆಸಿ 5ಲಕ್ಷದ 48ಸಾವಿರದ 81ರೂಗಳಷ್ಟು ನಿವ್ವಳ ಲಾಭ ಹೊಂದಿದೆ ಎಂದು ಹೇಳಿದರು.
ಕಂಪನಿಯ ಮುಂದಿನ ಐದು ವರ್ಷದ ಅವಧಿಯ ಆಡಳಿತ ಮಂಡಳಿಗೆ ಎಸ್.ಆರ್.ಹೆಗಡೆ ಕುಂಬಾರಕುಳಿ, ದಿನೇಶ ಹೆಗಡೆ ಕರ್ಕಿಸವಲ್, ಎಂ.ಎಲ್.ಭಟ್ಟ ಉಂಚಳ್ಳಿ,ನಾಗಪತಿ ಹೆಗಡೆ ಹರ್ತೆಬೈಲ್, ನಿರಂಜನ ಭಟ್ಟ ಹೊಸ್ತೋಟ, ಮಹಾಬಲೇಶ್ವರ ಹೆಗಡೆ ಕಂಚಿಕೈ, ರಾಜೀವ ನಾಯ್ಕ ಗವಿನಗುಡ್ಡ, ರವಿ ಭಟ್ಟ ಯಲೂಗಾರ,ಗಜಾನನ ಹೆಗಡೆ ಬಾಳೇಸರ, ಉಮಾಕಾಂತ ಹೆಗಡೆ ಹೀನಗಾರ, ಹೇಮಾವತಿ ಭಟ್ಟ ಕುಳಿಮನೆ, ರವೀಂದ್ರ ಹೆಗಡೆ ಹೊಂಡಗಾಸಿಗೆ, ತ್ರಯಂಬಕ ಹೆಗಡೆ ಶಿಗೇಹಳ್ಳಿ ಇವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ದಿನೇಶ ಹೆಗಡೆ ಚಳ್ಳೆಹದ್ದ ಅವರನ್ನು ಈ ಸಂದರ್ಭದಲ್ಲಿ ಗೌರಸವಿಲಾಯಿತು.
ಕಂಪನಿಯ ಸಿಇಒ ದರ್ಶನ ಹೆಗಡೆ ಹೊನ್ನೆಹದ್ದ ವಾರ್ಷಿಕ ವರದಿ ಮಂಡಿಸಿದರು. ಜಿ.ಎಂ.ಹೆಗಡೆ ಬಾಳೇಸರ, ಲೋಕೇಶ ಹೆಗಡೆ ಒಡಗೇರೆ,ರವೀಂದ್ರ ಹೆಗಡೆ ಹೊಂಡಗಾಶಿಗೆ ಕಾರ್ಯಕ್ರಮ ನಿರ್ವಹಿಸಿದರು. ಪ್ರಮೋದ ಕೊಡಿಯಾ ಸಹಕರಿಸಿದರು.