ಸಿದ್ದಾಪುರ: ತಾಲೂಕಿನ ಕಿಬ್ಬಳ್ಳಿಯ ಶ್ರೀ ಮಹಾಗಣಪತಿ ಪ್ರೌಢಶಾಲೆಯಲ್ಲಿ ಅರ್ಥಪೂರ್ಣವಾಗಿ ಕನಕ ಜಯಂತಿ ಆಚರಿಸಲಾಯಿತು.
ಪುಷ್ಪಾರ್ಚನೆಯನ್ನು ನೆರವೇರಿಸಿ ಭಕ್ತಿಪೂರ್ವಕವಾಗಿ ಜಯಂತಿಗೆ ಮುಖ್ಯಶಿಕ್ಷಕ ಜಿ.ವಿ ಹೆಗಡೆ ಚಾಲನೆ ನೀಡಿದರು. ಸಹ ಶಿಕ್ಷಕ ಶಿವಾನಂದ ಎಚ್ ಸಾಂದರ್ಭಿಕವಾಗಿ ಮಾತನಾಡಿದರು. ನಂತರ ಶಾಲಾ ಮಕ್ಕಳು ಕನಕದಾಸರ ಕೀರ್ತನೆಗಳನ್ನು ಹಾಡಿದರು. ಕನಕರ ಕೊಡುಗೆಗಳನ್ನು ಸ್ಮರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಯ ನಿವೃತ್ತ ಶಿಕ್ಷಕ ಕೆ.ಟಿ.ನಾಯ್ಕ, ಸಹ ಶಿಕ್ಷಕಿ ಸುಮಿತ್ರಾ ಭಟ್, ಸಹ ಶಿಕ್ಷಕರಾದ ಎಸ್.ಎನ್ ಹೆಗಡೆ, ಜಿ.ಟಿ.ಭಟ್, ಬೋಧಕೇತರ ಸಿಬ್ಬಂದಿ ಎಸ್.ಎನ್ ಭಟ್, ಎಸ್ ಎನ್ ಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಶಾಲಾ ಸಾಂಸ್ಕೃತಿಕ ಮಂತ್ರಿ ಪ್ರಜ್ಞಾ ಹೆಗಡೆ ನೆರವೇರಿಸಿದರೆ ಪ್ರಾಸಾವಿಕವನ್ನು ಶಾಲಾ ಪ್ರಧಾನಮಂತ್ರಿ ಆದಿತ್ಯ ಹೆಗಡೆ ಮಾಡಿದನು. ಮನು ಎಂ.ಎಸ್ ವಂದಿಸಿದರೆ, ಸಾಂಸ್ಕೃತಿಕ ಪ್ರಧಾನ ಕಾರ್ಯದರ್ಶಿ ಹರೀಶ್ ಹೆಗಡೆ ನಿರೂಪಿಸಿದನು.