ಯಲ್ಲಾಪುರ: ಪಟ್ಟಣದ ಗಾಂಧಿ ಕುಟೀರದಲ್ಲಿ 35 ನೇ ಸಂಕಲ್ಪ ಉತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಗಾನ-ವೈಭವ ಕಾರ್ಯಕ್ರಮವನ್ನು ಹಿರಿಯ ಭಾಗವತ ವಿದ್ವಾನ್ ಗಣಪತಿ ಭಟ್ಟ ಉದ್ಘಾಟಿಸಿದರು.
ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಕೋವಿಡ್ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತೆ ಆರಂಭವಾಗಿದ್ದು, ಕಲಾ ಸಂಘಟನೆಗಳು ಹೆಚ್ಚು ಹೆಚ್ಚು ನಡೆಯುವಂತಾಗಬೇಕು. ಕಲೆ, ಕಲಾವಿದರು, ಸಂಘಟಕರನ್ನು ಪ್ರೋತ್ಸಾಹಿಸುವ ಜವಾಬ್ದಾರಿ ಪ್ರತಿ ಕಲಾಭಿಮಾನಿಯದ್ದಾಗಿದೆ ಎಂದರು. ಕಲಾವಿದರಾದ ರಾಘವೇಂದ್ರ ಆಚಾರಿ, ಗಣಪತಿ ಭಾಗ್ವತ ಕವಾಳೆ, ಸಂಕಲ್ಪ ಸಂಸ್ಥೆಯ ಪ್ರಸಾದ ಹೆಗಡೆ, ಎನ್.ಎಸ್.ಭಟ್ಟ ಇತರರಿದ್ದರು.
ಗಾನವೈಭವದಲ್ಲಿ ವಿದ್ವಾನ್ ಗಣಪತಿ ಭಟ್ಟ, ರಾಘವೇಂದ್ರ ಆಚಾರಿ ಜನ್ಸಾಲೆ, ಅಮೃತಾ ಅಡಿಗ ವಿವಿಧ ಪೌರಾಣಿಕ ಪ್ರಸಂಗಗಳ ಪದ್ಯಗಳನ್ನು ಪ್ರಸ್ತುತಪಡಿಸಿದರು. ಮದ್ದಲೆವಾದಕರಾಗಿ ಶಂಕರ ಭಾಗ್ವತ, ಗಣಪತಿ ಭಾಗ್ವತ ಕವಾಳೆ, ಕೃಷ್ಣ ಪ್ರಕಾಶ ಉಳಿತ್ತಾಯ, ಚಂಡೆವಾದಕರಾಗಿ ಗಣೇಶ ಗಾಂವ್ಕಾರ, ಅಕ್ಷಯರಾವ್ ವಿಟ್ಲ, ಚಕ್ರತಾಳದಲ್ಲಿ ಸತ್ಯನಾರಾಯಣ ಅಡಿಗ ಭಾಗವಹಿಸಿದ್ದರು. ತೆಂಕು- ಬಡಗಿನ ಕಲಾವಿದರ ಸಮ್ಮಿಲನದ ಈ ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.