ಶಿರಸಿ: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ನಿಂದ ಅಭ್ಯರ್ಥಿ ಅಂತಿಮವಾಗಿದ್ದು, ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕಗೆ ಪಕ್ಷದಿಂದ ಅಧಿಕೃತವಾಗಿ ಟಿಕೆಟ್ ಘೋಷಣೆ ಮಾಡಲಾಗಿದೆ.
ಕಳೆದ ಮೂರ್ನಾಲ್ಕು ದಿನದಿಂದ ಬಾರೀ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್ ಸೀಟು ಹಂಚಿಕೆಯ ಸರ್ಕಸ್ ಕೊನೆಗೂ ಮುಕ್ತಾಯವಾಗಿದ್ದು, ಪಕ್ಷದ ಘಟಾನುಘಟಿಗಳನ್ನು ಮೀರಿಸಿ ನಿರೀಕ್ಷೆಯಂತೆ ಭೀಮಣ್ಣ ನಾಯ್ಕಗೆ ಟಿಕೆಟ್ ಅಂತಿಮವಾಗಿದೆ.