• Slide
    Slide
    Slide
    previous arrow
    next arrow
  • ಕ್ರೈಸ್ತ ಧರ್ಮದಿಂದ ಮತ್ತೆ ಸನಾತನ ಧರ್ಮಕ್ಕೆ 1200ಕ್ಕೂ ಹೆಚ್ಚು ಮಂದಿ ವಾಪಸ್

    300x250 AD

    ನವದೆಹಲಿ: ವಿವಿಧ ಅಕ್ರಮ ವಿಧಾನಗಳ ಮೂಲಕ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಛತ್ತೀಸ್‍ಗಢದ ಜಶ್‍ಪುರ ಜಿಲ್ಲೆಯ ಸುಮಾರು 300 ಕುಟುಂಬಗಳ 1200 ಕ್ಕೂ ಹೆಚ್ಚು ಜನರು ಮತ್ತೆ ಸನಾತನ ಧರ್ಮಕ್ಕೆ ಮರಳಿದ್ದಾರೆ.

    ಮಾಜಿ ಕೇಂದ್ರ ಸಚಿವ ದಿಲೀಪ್ ಸಿಂಗ್ ಜುದೇವ್ ಅವರ ಪುತ್ರ ಮತ್ತು ಪ್ರಸ್ತುತ ರಾಜ್ಯ ಬಿಜೆಪಿ ಸದಸ್ಯ ಪ್ರಬಲ್ ಸಿಂಗ್ ಜುದೇವ್ ಸಾವಿರಾರು ಜನರು ಭಾಗವಹಿಸಿದ್ದ ಸಮಾರಂಭದಲ್ಲಿ ಸನಾತನ ಧರ್ಮಕ್ಕೆ ಮರಳಿದವರ ಪಾದಗಳನ್ನು ತೊಳೆಯುವ ಮೂಲಕ ಸ್ವಾಗತಿಸಿದರು.

    ಸಮಾರಂಭದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಪ್ರಬಲ್ ಜುದೇವ್, ಹಿಂದುತ್ವವನ್ನು ರಕ್ಷಿಸುವುದು ತಮ್ಮ ಜೀವನದ ಏಕೈಕ ನಿರ್ಣಯವಾಗಿದೆ ಎಂದು ಹೇಳಿದರು. ಇಂದು ಅನೇಕ ಜನರು ತಮ್ಮ ಮೂಲ ಧರ್ಮಕ್ಕೆ ಮರಳಿರುವುದನ್ನು ಕಂಡು ಹರ್ಷ ವ್ಯಕ್ತಪಡಿಸಿದರು.

    ಛತ್ತೀಸ್‍ಗಢದ ದೂರದ ಪ್ರದೇಶಗಳಲ್ಲಿ ಒಂದಾದ ಬುಡಕಟ್ಟು ಪ್ರಾಬಲ್ಯದ ಈ ಜಿಲ್ಲೆ ನಿರಂತರವಾಗಿ ಕ್ರಿಶ್ಚಿಯನ್ ಮಿಷನರಿಗಳ ಗುರಿಯಾಗಿದೆ. ಏಷ್ಯಾ ಖಂಡದ ಎರಡನೇ ಅತಿ ದೊಡ್ಡ ಚರ್ಚ್ ಹೊಂದಿರುವ ಈ ಜಿಲ್ಲೆ, ಜಶ್ಪುರ್ ಕ್ರಿಶ್ಚಿಯನ್ನರು ಮತ್ತು ಹಿಂದೂಗಳ ಮಿಶ್ರ ಜನಸಂಖ್ಯೆಯನ್ನು ಹೊಂದಿದೆ.

    300x250 AD

    ಸನಾತನ ಧರ್ಮಕ್ಕೆ ಮರಳಿದ ಹೆಚ್ಚಿನ ಜನರು ಜಶ್‍ಪುರದ ಸರೈ ಪಾಲಾ ಬೆಸಾನಾ ಪ್ರದೇಶದಿಂದ ಬಂದವರು. ಈ ಬುಡಕಟ್ಟು ಪ್ರಾಬಲ್ಯದ ಪ್ರದೇಶದಲ್ಲಿ ಮಿಷನರಿಗಳ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದಾರೆ. ಮಿಷನರಿಗಳು ಯಾವಾಗಲೂ ಬಡ ಆರ್ಥಿಕ ಹಿನ್ನೆಲೆಯ ಜನರನ್ನು ಗುರಿಯಾಗಿಸಿಕೊಂಡು ಆರ್ಥಿಕ ನೆರವು ನೀಡುವ ಹೆಸರಿನಲ್ಲಿ ಮತಾಂತರ ಮಾಡುತ್ತಿದ್ದಾರೆ ಎಂದು ಪ್ರಬಲ್ ಜುದೇವ್ ಆರೋಪಿಸಿದ್ದಾರೆ.

    ಈ ಸಂದರ್ಭದಲ್ಲಿ ಸನಾತನ ಧರ್ಮಕ್ಕೆ ಮರಳಿದ ಜನರು ಮಾತನಾಡಿ, ಮಿಷನರಿಗಳು ಹಿಂದೂ ಧರ್ಮದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ನಮ್ಮ ಪೂರ್ವಜರಿಗೆ ಮಿಷನರಿಗಳು ಆರ್ಥಿಕ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿ ಕ್ರಿಶ್ಚಿಯನ್ ಧರ್ಮವನ್ನು ಅಭ್ಯಾಸ ಮಾಡಿಸಿದ್ದರು, ಈ ಮೂಲಕ ಅವರ ಎಲ್ಲಾ ಪಾಪಗಳನ್ನು ನಿರ್ಮೂಲನೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು ಎಂದು ಒಬ್ಬರು ಹೇಳಿದ್ದಾರೆ.

    ಸನಾತನ ಧರ್ಮಕ್ಕೆ ಮರಳಿದ ಕೆಲವು ಜನರು, ತಮ್ಮ ಪೂರ್ವಜರು ಶಿಕ್ಷಣದ ಕೊರತೆ ಮತ್ತು ಕಳಪೆ ಆರ್ಥಿಕ ಸ್ಥಿತಿಯಿಂದಾಗಿ ಮೂರು ತಲೆಮಾರುಗಳ ಹಿಂದೆ ಮತಾಂತರಗೊಂಡಿದ್ದಾರೆ ಎಂದು ತಿಳಿಸಿದರು. ಆದರೆ ಈಗ ವಿಷಯಗಳು ಬದಲಾಗಿವೆ ಮತ್ತು ಬುಡಕಟ್ಟು ಜನರಲ್ಲಿ ಜಾಗೃತಿಯ ಪ್ರಜ್ಞೆಯು ಹೆಚ್ಚುತ್ತಿದೆ, ಅವರು ತಮ್ಮ ಮೂಲ ಆಚರಣೆಯ ಧರ್ಮಕ್ಕೆ ಮರಳುತ್ತಿದ್ದಾರೆ ಎಂದಿದ್ದಾರೆ.

    ಜಶ್‍ಪುರದ ಪಥಲ್‍ಗಾಂವ್‍ನ ಖುಂತಪಾನಿ ಪ್ರದೇಶದಲ್ಲಿ ಹಿಂದೂ ಸಮಾಜ ಆಯೋಜಿಸಿದ್ದ ಎರಡು ದಿನಗಳ ಪವಿತ್ರ ಯಜ್ಞದ ಕೊನೆಯ ದಿನದಂದು ಈ ಸಮಾರಂಭವನ್ನು ಆಯೋಜಿಸಲಾಗಿತ್ತು ಮತ್ತು ಜಶ್‍ಪುರ ರಾಜಮನೆತನದ ಪ್ರಬಲ್ ಪ್ರತಾಪ್ ಸಿಂಗ್ ಜುದೇವ್ ಮುಖ್ಯ ಅತಿಥಿಯಾಗಿದ್ದರು. ಈ ಸುಸಂದರ್ಭದಲ್ಲಿ, ಈ ಪ್ರದೇಶದಲ್ಲಿ ಹಿಂದೂ ಬುಡಕಟ್ಟು ಜನಾಂಗದವರ ಉನ್ನತಿಗೆ ಅವಿರತವಾಗಿ ಶ್ರಮಿಸುತ್ತಿರುವ ಆರ್ಯ ಸಮಾಜದವರು ಸಹ ಹಾಜರಿದ್ದರು.
    ನ್ಯೂಸ್ 13

    Share This
    300x250 AD
    300x250 AD
    300x250 AD
    Leaderboard Ad
    Back to top