ಶಿರಸಿ: ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬಿ.ಎನ್.ವಾಸರೆ ಅವರು ಎದುರಾಳಿಯ ವಿರುದ್ದ ಭರ್ಜರಿ ಮತಗಳ ಅಂತರದಿಂದ ಗೆಲುವು ಸಾಧಿಸಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಇಂದು ಬೆಳಿಗ್ಗೆಯಿಂದ ನಡೆದ ಮತದಾನದಲ್ಲಿ ಒಟ್ಟೂ 2810 ಮತಗಳು ಚಲಾವಣೆಗೊಂಡಿದ್ದು, ಅದರಲ್ಲಿ ಸಿಂಹಪಾಲು ಮತವನ್ನು ಅಂದರೆ 1897 ಮತಗಳನ್ನು ಪಡೆದು ಬಿ.ಎನ್ ವಾಸರೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ಎದುರಾಳಿ ವೇಣುಗೋಪಾಲರು ಕೇವಲ 324 ಮತಗಳನ್ನು ಮಾತ್ರ ಪಡೆದುಕೊಂಡರು. ಯಲ್ಲಾಪುರ ಹೊರತಾಗಿ ಉಳಿದೆಲ್ಲೆಡೆ ಆಭರೀ ಮುನ್ನಡೆಗಳಿಸಿದ ಬಿ.ಎನ್ ವಾಸರೆ ಮುನ್ನಡೆಗಳಿಸಿದ್ದರು.