ಶಿರಸಿ: ಭಾನುವಾರ ಬೆಳಗ್ಗೆ ಸ್ವಲ್ಪ ಬಿಡುವು ನೀಡಿದ್ದ ಮಳೆ ಮಧ್ಯಾಹ್ನದ ನಂತರ ಮತ್ತೆ ಆರ್ಭಟ ಮುಂದುವರಿಸಿದೆ.
ಕಳೆದ ನಾಲ್ಕು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆ ಭಾನುವಾರವೂ ಮುಂದುವರಿದಿದೆ. ಭಾನುವಾರ ಶಿರಸಿಯಲ್ಲಿ 10.5, ಸಿದ್ದಾಪುರದಲ್ಲಿ 3.8, ಯಲ್ಲಾಪುರದಲ್ಲಿ 3.6, ಮುಂಡಗೋಡಿನಲ್ಲಿ 11.4 ಮಿ.ಮೀ. ಮಳೆಯಾಗಿದೆ.
ಭಾನುವಾರ ಸಂಜೆ ವೇಳೆಗೆ ಭಾರೀ ಮಳೆ ಸುರಿದಿದ್ದು, ಮಳೆಯಿಂದ ರೈತರು ಇನ್ನಷ್ಟು ಆತಂಕ ಸೃಷ್ಟಿಯಾಗಿದೆ. ಈಗಾಗಲೇ ಬೆಳೆ ರಕ್ಷಣೆಗೆ ಹೈರಾಣಾಗಿರುವ ರೈತರು ಮಳೆ ಕಡಿಮೆಯಾಗುವುದೆನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಮಳೆ ಮತ್ತೆ ಮುಂದುವರಿದಿದ್ದರಿಂದ ಚಿಂತಾಕ್ರಾಂತರಾಗಿದ್ದಾರೆ.