• Slide
    Slide
    Slide
    previous arrow
    next arrow
  • ವಿಶ್ವ ಮಾನ್ಯತೆ ಪಡೆದ ಡಾ.ಗಜಾನನ ಭಟ್ಟರ ‘ಸ್ತ್ರೀಯರ ಲೈಂಗಿಕ ಆರೋಗ್ಯ’ ಸಂಶೋಧನಾ ಪ್ರಬಂಧ

    300x250 AD

    ಶಿರಸಿ: ನಗರದ ಸರ್ಕಾರಿ ಆಸ್ಪತ್ರೆ ಮೂತ್ರ ರೋಗ ತಜ್ಞ ಡಾ. ಗಜಾನನ ಭಟ್ಟ ಅವರು ಬರೆದ ‘ಸ್ತ್ರೀಯರ ಲೈಂಗಿಕ ಆರೋಗ್ಯ’ ಸಂಶೋಧನಾ ಪ್ರಬಂಧಕ್ಕೆ ವಿಶ್ವದ ಅತ್ಯುತ್ತಮ ಲೈಂಗಿಕ ಪ್ರಬಂಧ ಎನ್ನುವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.


    ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಡಾ. ಗಜಾನನ ಭಟ್ಟ ಅವರು, ನ.19ರಂದು ಟೋಕಿಯೋದಲ್ಲಿ ನಡೆದ ವಿಶ್ವ ಲೈಂಗಿಕ ತಜ್ಞರ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳ ಶ್ತ್ರೀ ರೋಗ, ಲೈಂಗಿಕ ಸಮಸ್ಯೆ ಹಾಗೂ ಚರ್ಮ ರೋಗ ತಜ್ಞರು ಸೇರಿದಂತೆ ವೈದ್ಯರ ತಂಡ ರಚಿಸಿಕೊಂಡು ಮಾಹಿತಿ ಕಲೆ ಹಾಕಲಾಗಿದೆ. ಶಿರಸಿಯಲ್ಲಿ ಈ ಕುರಿತು ಅನೇಕ ಸಂಶೋಧನೆಗಳನ್ನು ಸಹಾ ನಡೆಸಲಾಗಿದೆ. ಈಗಾಗಲೇ 23 ಸಂಶೋಧನಾ ಪ್ರಬಂಧಗಳನ್ನು ರಚಿಸಲಾಗಿದೆ.

    300x250 AD

    ಲೈಂಗಿಕ ಪರಾಕಾಷ್ಟೆ ಮತ್ತು ಶೀಘ್ರ ಸ್ಕಲನ ವಿಷಯದ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಸ್ತ್ರೀಯರ ಲೈಂಗಿಕ ಆರೋಗ್ಯದ ಕುರಿತು ನಾವು ಕಲೆಹಾಕಿದ ಮಾಹಿತಿಗೆ ವಿಶ್ವ ಮಾನ್ಯತೆ ಸಿಕ್ಕಿರುವುದು ಸಂತೋಷದ ಸಂಗತಿ. ಈ ಮಹತ್ತರ ಕಾರ್ಯದಲ್ಲಿ ಪತ್ನಿ ಡಾ. ಅನುರಾಧಾ ಅವರ ಸಹಾಯ ಸಹಕಾರ ಹೆಚ್ಚಿದೆ. ಸಂಕೀರ್ಣ ವಿಷಯಗಳಲ್ಲಿ ವೈಜ್ಞಾನಿಕ ಸಲಹೆಗಳನ್ನು ಅವರಿಂದ ಪಡೆದಿದ್ದೇನೆ.


    ಅಲ್ಲದೇ ಸಂಶೋಧನೆಗೆ ಸಹಾಯ ಮಾಡಿದ ಪಂಡಿತ ಸಾರ್ವಜನಿಕ ಆಸ್ಪತ್ರೆ, ಶಿರಸಿ ಟಿಎಸ್‍ಎಸ್ ಆಸ್ಪತ್ರೆ ಹಾಗೂ ಹೊನ್ನಾವರ ಆಸ್ಪತ್ರೆ ಆಧಿಕಾರಿಗಳು ಹಾಗೂ ಮಾಹಿತಿ ನೀಡಿದ ಜನಸಾಮಾನ್ಯರನ್ನು ಸ್ಮರಿಸುವುದಾಗಿ ಪ್ರಕಣೆಯಲ್ಲಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top