• Slide
    Slide
    Slide
    previous arrow
    next arrow
  • ಸಾಧನೆಯ ದಾರಿಯಲ್ಲಿ ಗುರಿ ತಲುಪುವ ಧೈರ್ಯವಿರಲಿ; ಎಸ್ಪಿ ಸುಮನ್ ಪೆನ್ನೇಕರ್

    300x250 AD


    ಕುಮಟಾ: ಇಲ್ಲಿಯ ನಾದಶ್ರೀ ಕಲಾಕೇಂದ್ರದಲ್ಲಿ ರೋಟರಿ ಕ್ಲಬ್ ವತಿಯಿಂದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರತಿಭಾವಂತರಾಗಿ ಗುರುತಿಸಿಕೊಂಡ ಹೆಣ್ಣು ಮಕ್ಕಳನ್ನು ಹುರಿದುಂಬಿಸುವ ’ಸ್ಫೂರ್ತಿ’ ಎಂಬ ಹೆಸರಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಉತ್ತರ ಕನ್ನಡ ಜಿಲ್ಲಾ ನೂತನ ಪೋಲಿಸ್ ಅಧೀಕ್ಷಕರಾದ ಐಪಿಎಸ್ ಡಾ. ಸುಮನ್ ಪೆನ್ನೇಕರ್, ಮಾತನಾಡಿ, ’ಸಾಧನೆಯ ದಾರಿಯಲ್ಲಿ ಸಾಗುವಾಗ ವಿಚಲಿತರಾಗದೆ, ಎಂದೂ ಎದೆಗುಂದದೇ ಧೈರ್ಯವಾಗಿ ಗುರಿ ತಲುಪುವತ್ತ ಚಿತ್ತ ಹರಿಸಬೇಕೆಂದು ಕರೆ ನೀಡಿದರು. ನೀವು ಈಗ ಇಟ್ಟ ಹೆಜ್ಜೆಯನ್ನು ಗಟ್ಟಿಯಾಗಿ ಸ್ವಂತಿಕೆಯಿಂದ ಊರಿದಾಗ ಮಾತ್ರ ತನ್ನಷ್ಟಕ್ಕೆ ತಾನೇ ಸ್ವಯಂ ಸ್ಫೂರ್ತಿ ಉಂಟಾಗುತ್ತದೆ’ ಎಂದು ಭರವಸೆ ತುಂಬುವ ಮಾತುಗಳನ್ನಾಡಿದರು.


    ಜಿಲ್ಲೆಯ ಮೊದಲ ಮಹಿಳಾ ಸೂಪರಿಟೆಂಡೆಂಟ್ ಮೊದಲ ಬಾರಿ ಕುಮಟಾದಲ್ಲಿ ಸನ್ಮಾನಕ್ಕೊಳಪಡುತ್ತಿರುವುದಾಗಿ ಹೆಮ್ಮೆಯಿಂದ ನುಡಿಯುತ್ತಾ ರೋಟರಿ ಅಧ್ಯಕ್ಷೆ ಡಾ.ನಮೃತಾ ಶಾನಭಾಗ ಸ್ವಾಗತ ಕೋರಿದರು. ರೋಟರಿಯ ಜಿಲ್ಲಾ ಪ್ರಾಂತಪಾಲ ನಾಗರಾಜ ಜೋಶಿ, ಎನ್.ಆರ್.ಗಜು ಹಾಗೂ ಕಿರಣ ನಾಯಕ ಸಂಪಾದಕತ್ವದ ರೋಟೋಲೈಟ್ ದೈಮಾಸಿಕವನ್ನು ಬಿಡುಗಡೆಗೊಳಿಸಿದರು.

    300x250 AD


    ಶ್ರೀ ರಾವ್ ಪ್ರಾರ್ಥನಾ ಗೀತೆ ಹಾಡಿದರು. ಡಾ.ಚೈತ್ರಾ ನಾಯ್ಕ ರೋಟರಿಯ ಧ್ಯೇಯವಾಕ್ಯದ ಸಂದೇಶ ನೀಡಿದರು. ಕಾರ್ಯದರ್ಶಿ ಶಿಲ್ಪಾ ಜಿನರಾಜ್ ವರದಿ ವಾಚಿಸಿದರು. ಇದೇ ಸಂದರ್ಭದಲ್ಲಿ ರೋಟರಿಯ ಡಿಜಿಎನ್ ದಿ.ವಿಷ್ಣು ಕಾಮತ ಅವರ ಸ್ಮರಣಾರ್ಥ ಡಾ.ದೀಪಕ ಡಿ. ನಾಯಕ ನುಡಿನಮನ ಸಲ್ಲಿಸಿದರು. ಡಾ.ಆಜ್ಞಾ ನಾಯಕ ಪರಿಚಯಿಸಿದರು. ಜಯವಿಠ್ಠಲ ಕುಬಾಲ ಮತ್ತು ಸುಜಾತಾ ಶಾನಭಾಗ ನಿರ್ವಹಿಸಿದರು. 25ಕ್ಕೂ ಅಧಿಕ ಸಾಧನಾ ಪಥದಲ್ಲಿರುವ ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು. ರೋಟರಿ ಪರಿವಾರದ ಸದಸ್ಯರು, ಹೊಂಗಿರಣ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top