• Slide
    Slide
    Slide
    previous arrow
    next arrow
  • ಹೊನ್ನಾವರದಲ್ಲಿ ಪುನೀತರಾಜಕುಮಾರ್’ಗೆ ನುಡಿನಮನ

    300x250 AD


    ಹೊನ್ನಾವರ: ಕರ್ನಾಟಕ ಕ್ರಾಂತಿರಂಗ ಜಿಲ್ಲಾಘಟಕ, ಅಪ್ಪು ಅಭಿಮಾನಿ ಬಳಗದ ವತಿಯಿಂದ ಶರಾವತಿ ವೃತ್ತದ ಬಳಿ ಪುನೀತರಾಜಕುಮಾರ್ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಸಿದರು.


    ಈ ಸಂದರ್ಭದಲ್ಲಿ ಪಟ್ಟಣದ ಗೇರುಸೊಪ್ಪ ಸರ್ಕಲ್ ಬಳಿ ಪುನೀತ್ ಸ್ಮಾರಕ ನಿರ್ಮಾಣಕ್ಕೆ ಅನುಮತಿಗಾಗಿ ವಿವಿಧ ಇಲಾಖೆಗೆ ಮುಂದಿನ ದಿನಗಳಲ್ಲಿ ಮನವಿ ಸಲ್ಲಿಸಲಿದ್ದು, ಸಾಂಕೇತಿಕವಾಗಿ ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತಾ ಅವರಿಗೆ ಮನವಿ ನೀಡಿದರು

    ಸಂಘಟನೆಯ ರಾಜ್ಯಾಧ್ಯಕ್ಷ ಮಂಚೇಗೌಡ ಬಿ ಎಚ್ ಮಾತನಾಡಿ, ಪುನೀತ್ ಅವರು ಒಂದು ಅಧ್ಭುತ ಶಕ್ತಿಯಾಗಿದ್ದರು. ಅವರು ಮಾಡಿದ ಉತ್ತಮ ಕೆಲಸ-ಕಾರ್ಯಗಳು ಅವರು ನಮ್ಮಂದ ದೂರವಾದ ಬಳಿಕ ಪರಿಚಯವಾಗಿದೆ. ಸಾಮಾಜಿಕ, ಶೈಕ್ಷಣಿಕ ಎಲ್ಲ ಕಾರ್ಯದಲ್ಲಿ ಒಬ್ಬ ಮಾದರಿ ವ್ಯಕ್ತಿಯಾಗಿದ್ದರು ಎಂದರು.

    ಮಾಜಿ ಶಾಸಕಿ ಶಾರದಾ ಶೆಟ್ಟಿ ಮಾತನಾಡಿ,ಡಾ.ರಾಜ್‍ಕುಟುಂಬ ಎಲ್ಲರಿಗೂ ಮಾದರಿ. ಪುನೀತ್ ಅವರಕೊಡುಗೆ ನಮ್ಮಗೆಲ್ಲರಿಗೂ ಸ್ಪೂರ್ತಿಯಾಗಬೇಕಿದೆ ಎಂದರು.

    ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಮಾತನಾಡಿ, ದೇಶ ವಿದೇಶದಲ್ಲಿಯಲ್ಲಿಯೂ ಅವರ ನಿಧನದ ಬಳಿಕ ಕಂಬನಿ ಮಿಡಿಯುವುದನ್ನು ನೋಡಿದರೆ ಅವರ ವ್ಯಕ್ತಿತ್ವದಅರಿವಾಗಲಿದೆ ಎಂದರು.

    300x250 AD

    ಜಿ.ಪಂನಿಕಟಪೂರ್ವ ಸದಸ್ಯ ಶಿವಾನಂದ ಹೆಗಡೆಕಡತೋಕಾ ಮಾತನಾಡಿ,ಅತಿಚಿಕ್ಕ ವಯಸ್ಸಿನಲ್ಲಿ ಸಮಾಜಸೇವೆಯ ಮೂಲಕ ಜನಾನುರಾಗಿಯಾಗಿದ್ದರು ಎಂದರು.

    ಹೊನ್ನಾವರ ಪ.ಪಂ ಅಧ್ಯಕ್ಷ ಶಿವರಾಜ ಮೇಸ್ತಾ ಮಾವಿನಕುರ್ವಾ, ಗ್ರಾ.ಪಂಅಧ್ಯಕ್ಷಜಿ.ಜಿ ಶಂಕರ್, ತಾ.ಪಂ. ಮಾಜಿ ಸದಸ್ಯತುಕರಾಂ ನಾಯ್ಕ, ಕಾಂತ್ರಿರಂಗ ಸಂಘಟನೆಯಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕ ನುಡಿನಮನ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಸಿಪಿಐ ಶ್ರೀಧರ ಎಸ್.ಆರ್., ಪಿಎಸೈ ಶಶಿಕುಮಾರ್, ಜಿ.ಪಂನಿಕಟಪೂರ್ವ ಸದಸ್ಯೆ ಪುಷ್ಪ ನಾಯ್ಕ, ಬ್ಲಾಕ್‍ ಕಾಂಗ್ರೇಸ್‍ ಅಧ್ಯಕ್ಷ ಜಗದೀಪತೆಂಗೇರಿ, ಗೋವಿಂದ್ ನಾಯ್ಕ, ರವಿ ಶೆಟ್ಟಿ ಕವಲಕ್ಕಿ, ಸಂಘಟನೆಯ ಸಚಿನ್ ನಾಯ್ಕ, ಜ್ಞಾನೇಶ್ವರ ನಾಯ್ಕ, ದೇವೆಂದ್ರ ನಾಯ್ಕ, ಸಂದೀಪ್ ನಾಯ್ಕ, ಅನಂತ ನಾಯ್ಕ, ಈಶ್ವರ ನಾಯ್ಕ ಸದಸ್ಯರು ಪುನೀತ್ ಅಭಿಮಾನಿಗಳು ಪಾಲ್ಗೊಂಡಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top