• Slide
    Slide
    Slide
    previous arrow
    next arrow
  • ಪ್ರತಿಫಲ ಬಯಸದೇ ಉತ್ತಮ ಸಮಾಜಕ್ಕಾಗಿ ಕೆಲಸ ಮಾಡಿ; ಶಾಸಕಿ ರೂಪಾಲಿ

    300x250 AD


    ಕಾರವಾರ: ಮನುಷ್ಯನಾದವನು ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಹಾಗೇ ಪ್ರತಿಫಲ ಬಯಸದೇ ಸಮಾಜಕ್ಕೆ ಉತ್ತಮ ರೀತಿಯ ಸೇವೆ ಸಲ್ಲಿಸಿದಾಗ ಮಾತ್ರ ಜಗತ್ತು ಆತನನ್ನು ಗೌರವದಿಂದ ಕಾಣುತ್ತದೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.


    ಕಾರವಾರದ ಕನ್ನಡ ಭವನದಲ್ಲಿ ಶನಿವಾರ ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾ ಸಂಘಟನೆಯ ವತಿಯಿಂದ ಆಯೋಜಿಸಿದ್ದ 66ನೇ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ಮತ್ತು ಕನ್ನಡ ಚಿತ್ರರಂಗದ ಮೇರು ನಟ ದಿ.ಪುನೀತ್‍ರಾಜಕುಮಾರ್ ನುಡಿನಮನ ಕಾರ್ಯಕ್ರಮದ ಅಂಗವಾಗಿ ನೇತ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಯಕರ್ನಾಟಕ ಜನಪರ ವೇದಿಕೆ ಕನ್ನಡಪರ ಹೋರಾಟಗಳಲ್ಲಿ ತೊಡಗಿಸಿಕೊಂಡು ನಾಡು-ನುಡಿ ರಕ್ಷಣೆಗೆ ತನ್ನದೇ ಕೊಡುಗೆಯನ್ನು ನೀಡುತ್ತಿದೆ. ಸಂಘಟನೆಯ ಜಿಲ್ಲಾಧ್ಯಕ್ಷ ದಿಲೀಪ್ ಅರ್ಗೇಕರ ನೇತೃತ್ವದಲ್ಲಿ ಹಲವು ಸಾಮಾಜಿಕ ಬದ್ಧತೆಯ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.


    ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಬಿ ಹರಿಕಂತ್ರ ಮಾತನಾಡಿ, ಜಯಕರ್ನಾಟಕಜನಪರ ವೇದಿಕೆ ವಿದ್ಯಾರ್ಥಿಗಳಿಗೆ ಪ್ರತಿಭಾಗೌರವಕಾರ್ಯಕ್ರಮ ಆಯೋಜಿಸಿರುವುದು ಹರ್ಷತಂದಿದೆ. ಪುನೀತ್‍ರಾಜಕುಮಾರ್ ಪುಣ್ಯಸ್ಮರಣೆಯ ಅಂಗವಾಗಿ ಕಾರವಾರದಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಬಹಿರಂಗ ವೇದಿಕೆಯಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದರು.


    ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆಯಆರ್‍ಎಮ್‍ಒಡಾ. ವೆಂಕಟೇಶ, ನೇತ್ರದಾನದ ಮಹತ್ವ ನೇತ್ರದಾನದಕುರಿತಾಗಿರುವ ಕಾನೂನಿನ ಕುರಿತು ತಿಳುವಳಿಕೆ ನೀಡಿದರು.

    300x250 AD


    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉತ್ತರಕನ್ನಡ ಜಿಲ್ಲಾ ಮೀನು ಮಾರಾಟ ಸಹಕಾರಿ ಫೆಡರೇಶನ್ ಮಾಜಿ ಅಧ್ಯಕ್ಷ ಗಣಪತಿ ಮಾಂಗ್ರೆ, ಕನ್ನಡದ ರಕ್ಷಣೆಗೆ ಕನ್ನಡಿಗರು ಎಂತಹ ಹೋರಾಟಕ್ಕೂ ಸಿದ್ಧರಿದ್ದಾರೆ. 24 ವರ್ಷಗಳ ಹಿಂದೆ ಕಾರವಾರದಲ್ಲಿ ಕನ್ನಡದ ಅಸ್ಮಿತೆಯ ವಿಚಾರವಾಗಿ ಉಗ್ರ ಹೋರಾಟ ನಡೆಸಲಾಗಿತ್ತು. ಕನ್ನಡದ ರಕ್ಷಣೆಯ ಮಹತ್ತರ ಜವಾಬ್ದಾರಿಯನ್ನುಜಯಕರ್ನಾಟಕಜನಪರ ವೇದಿಕೆ ಮುಂದುವರಿಸಿಕೊಂಡು ಬರುತ್ತಿದೆಎಂದರು.


    ಇದೇ ವೇಳೆ ಸಂಘಟನೆಯಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ, ಕಾರ್ಯಧ್ಯಕ್ಷರೋಷನ್ ಹರಿಕಂತ್ರ, ಜಿಲ್ಲಾ ಮಹಿಳಾ ಕಾರ್ಯಧ್ಯಕ್ಷೆರುಕ್ಮಿಣಿಗೌಡ, ಅಂಕೋಲಾ ತಾಲೂಕುಅಧ್ಯಕ್ಷ ವಿಘ್ನೇಶ್ ನಾಯ್ಕ, ಅಂಕೋಲಾ ಪುರಸಭೆ ಉಪಾಧ್ಯಕ್ಷೆ ರೇಖಾ ಗಾಂವಕರ, ಸಾಮಾಜಿಕ ಕಾರ್ಯಕರ್ತೆ ತಾರಾ ಗಾಂವಕರ, ಕಾರವಾರ ತಾಲ್ಲೂಕು ಅಧ್ಯಕ್ಷ ಮೋಹನ ಉಳ್ವೇಕರ, ಸೇರಿದಂತೆ 28 ಜನರು ನೇತ್ರದಾನ ಮಾಡಲುಒಪ್ಪಿಗೆ ಸೂಚಿಸಿ ಆರೋಗ್ಯ ಇಲಾಖೆಯ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು. ಜಿಲ್ಲಾ ಕಾರ್ಯದರ್ಶಿ ಸತೀಶಅರ್ಗೇಕರ ವೇದಿಕೆಯಲ್ಲಿದ್ದರು.

    ಕಾರವಾರತಾಲೂಕು ಬಿಜೆಪಿ ಗ್ರಾಮೀಣಘಟಕದಅಧ್ಯಕ್ಷ ಮತ್ತು ಸಂಘಟನೆಯ ಮುಖಂಡ ಸುಭಾಷ ಗುನಗಿ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕ ಮಾರುತಿ ಹರಿಕಂತ್ರಕಾರ್ಯಕ್ರಮ ನಿರ್ವಹಿಸಿದರು. ಸಂಘಟನೆಯಜಿಲ್ಲಾ ಕಾರ್ಯದರ್ಶಿ ರಾಜೇಶ್ ಹರಿಕಂತ್ರ, ಜಿಲ್ಲಾ ಸಂಚಾಲಕ ಗೋಪಾಲ ಗೌಡ, ಸುನಿಲ ತಾಂಡೇಲ, ಪ್ರವೀಣತಾಂಡೇಲ, ವಿನಾಯಕಖಾರ್ವಿಗಣರಾಜಟಾಕೇಕರ, ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯರುಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top