ಕಾರವಾರ: ಗುಣಮಟ್ಟದ ಕಾಮಗಾರಿಗಳನ್ನು ನಿರ್ದಿಷ್ಟ ಸಮಯದಲ್ಲಿ ಅನುಷ್ಠಾನಗೊಳಿಸಿ ಪ್ರತಿ ಮನೆಗಳಿಗೆ ನಳ ಸಂಪರ್ಕದ ಮೂಲಕ ನೀರು ಕಲ್ಪಿsssಸುವ ಕಾರ್ಯ ಶೀಘ್ರದಲ್ಲಿ ಕೈಗೊಳ್ಳಬೇಕೆಂದು ಜಿಪಂ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪ್ರಿಯಾಂಗಾ ಎಂ. ಸೂಚಿಸಿದರು.
ಶುಕ್ರವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಹಳಿಯಾಳ ತಾಲೂಕಿನ ತೇರಗಾಂವ, ಕಾವಲವಾಡ ಮತ್ತುಜಿಲ್ಲೆಯಇತರೆ 111 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಗುತ್ತಿಗೆದಾರರೊಂದಿಗೆ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿ, ಮಾತನಾಡಿದ ಅವರು, ಕಾಮಗಾರಿಗಳ ಗುಣಮಟ್ಟಉತ್ತಮವಾಗಿರಬೇಕು. ಮನುಷ್ಯನ ಮೂಲಭೂತಅವಶ್ಯಕತೆಯಲ್ಲಿಕುಡಿಯುವ ನೀರುಒಂದಾಗಿದ್ದು, ನಿರಂತರ ಹಾಗೂ ಅವಶ್ಯ ಪ್ರಮಾಣದ ಶುದ್ಧ ಮತ್ತು ಸಮರ್ಪಕಕುಡಿಯುವ ನೀರನ್ನು ನಳ ಸಂಪರ್ಕದ ಮೂಲಕ ಗ್ರಾಮೀಣಜನರ ಮನೆಬಾಗಿಲಿಗೆ ಪೂರೈಸಬೆಕೆಂಬ ಉದ್ದೇಶದಿಂದಕೇಂದ್ರ ಸರ್ಕಾರದ ಜಲ ಜೀವನ ಮಿಶನ್‍ಅಭಿಯಾನದ ಅಡಿಯಲ್ಲಿ ರಾಜ್ಯ ಸರ್ಕಾರವು ಮನೆ ಮನೆಗೆ ಗಂಗೆ ಯೋಜನೆ ರೂಪಿಸಿದೆ. ಇದನ್ನುಜಿಲ್ಲೆಯಲ್ಲಿಅತ್ಯುತ್ತಮವಾಗಿ ಅನುಷ್ಠಾನಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಪ್ರಸ್ತುತ ಸಾಲಿನಲ್ಲಿಜಿಲ್ಲೆಯಲ್ಲಿಒಟ್ಟು 45319 ಮನೆಗಳಿಗೆ ನಳ ಸಂಪರ್ಕಒದಗಿಸಲು 347 ಕಾಮಗಾರಿಗಳಿಗೆ ಅನುಮೋದನೆದೊರಕಿದ್ದು, ಈಗಾಗಲೇ 256 ಕಾಮಗಾರಿಗಳಿಗೆ ಅಂದಾಜು ಪತ್ರಿಕೆಯನ್ನು ತಯಾರಿಸಲಾಗಿದೆ. 9 ಕಾಮಗಾರಿಗಳ ಅಂದಾಜು ಪತ್ರಿಕೆಗಳಿಗೆ ಆಡಳಿತಾತ್ಮಕ ಮತ್ತುತಾಂತ್ರಿಕ ಮಂಜೂರಾತಿಕೂಡ ನೀಡಲಾಗಿದೆ. ಜಿಲ್ಲೆಯಲ್ಲಿ 45319 ಮನೆಗಳಿಗೆ ನೀರು ಪೂರೈಸುವ ಯೋಜನೆಗೆರೂ 127.35 ಕೋಟಿ ನಿಗದಿಪಡಿಲಾಗಿದ್ದು, ನಿಗದಿಪಡಿಸಿದ ಮೊತ್ತದ ಶೇ. 42.5 ರಷ್ಟುಕೇಂದ್ರದ ಪಾಲು, ಶೇ. 42.5 ರಷ್ಟುರಾಜ್ಯದ ಪಾಲು, ಶೇ. 10 ರಷ್ಟು ಸಮುದಾಯದ ಪಾಲು ಹಾಗೂ ಶೇ. 5 ರಷ್ಟು ಮೊತ್ತವನ್ನುಆಯಾಗ್ರಾಮ ಪಂಚಾಯತಿಗಳು ಭರಿಸಲಿದ್ದು, ಎಲ್ಲೂಕೂಡ ಕಾಮಗಾರಿಗಳು ಕಳಪೆ ಮಟ್ಟದ್ದಾಗಿರಬಾರದು ಎಂದು ಹೇಳಿದರು.
ಜಿಲ್ಲಾ ಗ್ರಾಮೀಣಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿ ಸಭೆಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ 2020-21 ನೇ ಸಾಲಿನಲ್ಲಿ 48653 ಮನೆಗಳಿಗೆ ನಳ ಸಂಪರ್ಕಒದಗಿಸಲು 274 ಕಾಮಗಾರಿಗಳನ್ನು ಕೈಗತ್ತಿಕೊಂಡಿದ್ದುಅದರಲ್ಲಿ 93 ಕಾಮಗಾರಿಯು ಈಗಾಗಲೇ ಮುಕ್ತಾಯಗೊಳಿಸಿ ಒಟ್ಟು 26013 ಮನೆಗಳಿಗೆ ನಳ ನೀರು ಸಂಪರ್ಕಒದಗಿಸಲಾಗಿದೆ. ಅನುಷ್ಠಾನಗೊಂಡಿರುವ ಕಾಮಗಾರಿಗಳ ವೆಚ್ಚ 27.49 ಕೋಟಿಯಾಗಿರುತ್ತದೆಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಲ್ಲಾ 11 ಉಪ-ವಿಭಾಗದ ಸಿಬ್ಬಂದಿ ಹಾಜರಿದ್ದರು.