ಹೊನ್ನಾವರ: ಬಂಗಾಳಕೊಲ್ಲಿ ಬಾಯುಭಾರ ಕುಸಿತದ ಪರಿಣಾಮ ಸುರಿಯುತ್ತಿರುವ ಅಕಾಲಿಕ ಮಳೆಗೆ ಹಲವೆಡೆ ಅನಾಹುತಗಳು ಸಂಭವಿಸಿದ್ದು ಜನ-ಜೀವನ ಅತವ್ಯಸ್ಥಗೊಂಡಿದೆ.
ಒಂದೇ ಸಮಸನೆ ಸುರಿದ ಮಳೆಗೆ ತಾಲೂಕಿನ ಎರಡು ಮನೆಗಳಿಗೆ ಹಾನಿಯಾಗಿದ್ದು, ರೈತರ ಗದ್ದೆ ಹಾಗೂ ಅಡಿಕೆ ಬೆಳೆಗಾರರು ತೀವ್ರ ಕಷ್ಟದಲ್ಲಿದ್ದಾರೆ.
ಪಟ್ಟಣದ ಪ್ರಭಾತನಗರದ ಗೌರಿ ಲಕ್ಷ್ಮಣ ಅಂಬಿಗ ಇವರ ಮನೆಯ ಮೇಲ್ಛಾವಣೆಗೆ ಹಾನಿಯಾಗಿದೆ. ಬಳ್ಕೂರಿನ ಸುರೇಖಾ ಮಹಾಬಲೇಶ್ವರ ನಾಯ್ಕ ಇವರ ಮನೆಯ ಗೋಡೆ ಕುಸಿದು ಹಾನಿ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪಂಚನಾಮೆ ನಡೆಸಿದ್ದಾರೆ. ಇನ್ನು ಎರಡು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.