ಕಾರವಾರ: ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಗಳ ನೇಮಕಾತಿ ನಿಷೇಧ ಮತ್ತು ಅದರ ಪುನರ್ವಸತಿ ಕಾಯ್ದೆ-2013 ಪ್ರಕಾರ ಸ್ಥಳೀಯ ಸಂಸ್ಥೆಗಳು ತನ್ನ ಅಧಿಕಾರ ವ್ಯಾಪ್ತಿಯೊಳಗೆ ಅಸ್ತಿತ್ವದಲ್ಲಿರುವ ಅನೈರ್ಮಲ್ಯ ಶೌಚಾಲಯಗಳನ್ನು ನಿಷೇಧಿಸಿ ಅವುಗಳನ್ನು ನೈರ್ಮಲ್ಯ ಶೌಚಾಲಯಗಳನ್ನಾಗಿ ಪರಿವರ್ತಿಸಬೇಕಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಅನೈರ್ಮಲ್ಯ ಶೌಚಾಲಯಗಳು ಕಂಡುಬಂದಲ್ಲಿ ಸ್ಥಳೀಯ ಗ್ರಾಮ, ತಾಲೂಕ ಅಥವಾ ಜಿಲ್ಲಾ ಪಂಚಾಯತಗಳಿಗೆ ಮಾಹಿತಿ ನೀಡಬೇಕು. ಅನೈರ್ಮಲ್ಯ ಶೌಚಾಲಯಗಳೆಂದರೆ, ಶೌಚಾಲಯದ ಕಟ್ಟಡದಿಂದ ಹೊರಗಡೆ ಮಾನವನ ಮಲವನ್ನು ನೇರವಾಗಿ ತೆರದಗುಂಡಿ, ಬಯಲು ಪ್ರದೇಶ, ನದಿ, ಉಪ ನದಿಗಳಲ್ಲಿ ಅಥವಾ ಜಲಮೂಲಗಳಿಗೆ ಬಿಡುತ್ತಿದ್ದಲ್ಲಿ ಅವುಗಳನ್ನು ಅನೈರ್ಮಲ್ಯ ಶೌಚಾಲಯಗಳೆಂದು ಪರಿಗಣಿಸಲಾಗುತ್ತದೆ.
ಆದ್ದರಿಂದ ಇಂತಹ ಶೌಚಾಲಯಗಳು ಗ್ರಾಮೀಣ ಪ್ರದೇಶದಲ್ಲಿ ಕಂಡುಬಂದರೆ ಕೂಡಲೇ ಅವುಗಳನ್ನು ತೆರವುಗೊಳಿಸಿ ನೈರ್ಮಲ್ಯ ಶೌಚಾಲಯಗಳನ್ನಾಗಿ ನಿರ್ಮಾಣ ಮಾಡುವುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.