ಅಂಕೋಲಾ: ಎಡೆಬಿಡದೆ ಸುರಿಯುತ್ತಿರುವ ಅಕಾಲಿಕ ಮಳೆಯ ಕಾರಣ ನ.29, 30 ರಂದು ನಡೆಯಬೇಕಿದ್ದ ದಹಿಂಕಾಲ ಉತ್ಸವವನ್ನು ಡಿ.29 ಹಾಗೂ 30 ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ದಹಿಂಕಾಲ ಉತ್ಸವ ಸಮಿತಿಯ ಅಧ್ಯಕ್ಷ ಜಟ್ಟಿ ಬಿ. ನಾಯ್ಕ ತಿಳಿಸಿದ್ದಾರೆ.
ಅವರು ದಹಿಂಕಾಲ ಉತ್ಸವ ಸಮಿತಿಯ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ವಾಯುಭಾರ ಕುಸಿತದಿಂದಾಗಿ ಅಕಾಲಿಕವಾಗಿ ಮಳೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಕಾರ್ತಿಕೋತ್ಸವವನ್ನು ಸಹ ಮುಂದೂಡಲ್ಪಟ್ಟಿದ್ದರಿಂದ, ದಹಿಂಕಾಲ ಉತ್ಸವವನ್ನು ಸಹ ಮುಂದೂಡಲಾಗಿದೆ. ಡಿ. 29 ಹಾಗೂ 30 ನಡೆಯಲಿರುವ ದಹಿಂಕಾಲ ಉತ್ಸವವನ್ನು ಇನ್ನೂ ವೈಭವಯುತವಾಗಿ ಆಚರಿಸಲಾಗುವುದು. ಸಾರ್ವಜನಿಕರು ಸಹಕರಿಸಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ನಾಮಧಾರಿ ಒಕ್ಕೂಟದ ಅಧ್ಯಕ್ಷ ಎಮ್.ಪಿ.ನಾಯ್ಕ, ಉಪಾಧ್ಯಕ್ಷ ಮಂಜುನಾಥ ಡಿ.ನಾಯ್ಕ ಬೇಳಾ, ಸಿಮೆಂಟ್ ಪ್ರಕಾಶ, ಕಾರ್ಯದರ್ಶಿ ಮಂಜುನಾಥ ವಿ. ನಾಯ್ಕ, ಪ್ರಮುಖರಾದ ಸುರೇಶ ನಾಯ್ಕ, ಸಂತೋಷ ಆರ್. ನಾಯ್ಕ, ಅಶೋಕ ಎಸ್.ನಾಯ್ಕ, ಉದಯ ಎನ್.ನಾಯ್ಕ, ನಾಗರಾಜ ಬಿ.ನಾಯ್ಕ, ನಾಗೇಂದ್ರ ನಾಯ್ಕ ಬೇಳಾ, ಕೃಷ್ಣ ಎಸ್.ನಾಯ್ಕ, ಪ್ರಕಾಶ ಪಳ್ಳಿಕೇರಿ, ರಾಜೇಶ ಜಿ.ನಾಯ್ಕ ಬೇಳಾ, ಜಯಪ್ರಕಾಶ ನಾಯ್ಕ, ಶಿವಾನಂದ ಎಲ್.ನಾಯ್ಕ, ನಾಗೇಂದ್ರ ಚೆನ್ನಪ್ಪಾ ನಾಯ್ಕ, ರವಿಕುಮಾರ್ ಪಿ. ನಾಯ್ಕ, ನಾಗೇಶ ವಿ. ನಾಯ್ಕ, ರಮೇಶ ಎಸ್.ನಾಯ್ಕ, ವಾಸುದೇವ ನಾಯ್ಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.