• first
  second
  third
  previous arrow
  next arrow
 • ನ.23ಕ್ಕೆ ಶ್ರೀ ಸತ್ಯಸಾಯಿ ಬಾಬಾ ಅವರ 96ನೇ ಜನ್ಮ ದಿನೋತ್ಸವ

  300x250 AD


  ಕಾರವಾರ: ಶ್ರೀ ಶಿರಡಿ ಸಾಯಿ ಮಂದಿರ, ಹಿರೇಶಿಟ್ಟಾ ಬಾಡದಲ್ಲಿ ಶ್ರೀ ಸತ್ಯಸಾಯಿ ಬಾಬಾರವರ 96ನೇ ಜನ್ಮ ದಿನೋತ್ಸವವನ್ನು ನ.23ಕ್ಕೆ ಬಹಳ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಿಳಿಸಿದ್ದಾರೆ.

  ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಸ್ವಾಮಿಯವರ 96ನೇ ಜನ್ಮ ದಿನೋತ್ಸವಕ್ಕಾಗಿ ಹೊಸದಾಗಿ ತಯಾರಿಸಿದ ಸ್ವಾಮಿಯವರ ಝಲಾವನು ನ.21 ರವಿವಾರ ಸಂಜೆ 4.00 ಗಂಟೆಗೆ ನೂತನ ಝಲಾವನ್ನು ಶ್ರೀ ಸತ್ಯಸಾಯಿ ಸೇವಾ ಸಮಿತಿ, ವಾಜಂತ್ರಿವಾಡದ ಸ್ವಾಮಿಯವರ ಸನ್ನಿಧಿಯಿಂದ ತೇಲಂಗ ರಸ್ತೆ ಮಾರ್ಗದ ಮೂಲಕ ಹಿರೇಶಿಟ್ಟಾ ಸಾಯಿ ಮಂದಿರಕ್ಕೆ ಮೆರವಣಿಗೆ ಮೂಲಕ ತರಲಾಗುವುದು. ಮೆರವಣಿಗೆಯಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯವರ ಕೃಪೆಗೆ ಪಾತ್ರರಾಗಲು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

  300x250 AD

  ನ.23ರ ಜನ್ಮ ದಿನೋತ್ಸವದ ಕಾರ್ಯಕ್ರಮಗಳ ವಿವರ: ಪ್ರಾತಃಕಾಲ 5.00 ರಿಂದ 6.00 ಯವರೆಗೆ ಓಂಕಾರ, ಸುಪ್ರಭಾತ, ನಗರ ಸಂಕೀರ್ತನೆ, ಪ್ರಶಾಂತಿ ಧ್ವಜಾರೋಹಣ, ಸಂಜೆ 4.00 ರಿಂದ 7.00 ಭಜನೆ, ಝಲಾ ಕಾರ್ಯಕ್ರಮ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಈ ಶುಭ ಸಮಾರಂಭಕ್ಕೆ ಸರ್ವರೂ ಆಗಮಿಸಿ, ನೆರವೇರಲಿರುವ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ಕೋರಿದೆ.

  Share This
  300x250 AD
  300x250 AD
  300x250 AD
  Back to top