ಶಿರಸಿ: ಪ್ರಾಮಾಣಿಕ ಸದಸ್ಯರೇ ಸಹಕಾರ ಸಂಘದ ಅಸ್ತಿತ್ವದ ಬುನಾದಿ ಎಂದು ಟಿಎಸ್‍ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಹೇಳಿದರು.
ನಗರದ ಟಿಎಸ್‍ಎಸ್ ಸಭಾಂಗಣದಲ್ಲಿ ಶನಿವಾರ ನಡೆದ ಸಂಘದ ಹಿರಿಯ ನಿಷ್ಠಾವಂತ ಸದಸ್ಯರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು. ಸಹಕಾರಿ ಸಂಘ ನಿಂತಿರುವುದೇ ಸದಸ್ಯರೆನ್ನುವ ಬುನಾದಿ ಮೇಲೆ. ಸಂಘ ಸದಸ್ಯರಿಗೂ ಸದಸ್ಯರು ಸಂಘಕ್ಕೂ ನಿಷ್ಠರಾಗಿರಬೇಕು. ಆಗ ಮಾತ್ರ ಸಂಸ್ಥೆಯ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಸಹಕಾರಿ ಸಂಘದ ಮೂಲ ಪರಿಕಲ್ಪನೆ ಎಂದರೆ ಸದಸ್ಯರಿಂದ ಸದಸ್ಯರಿಗಾಗಿ ಸದಸ್ಯರೇ ನಿರ್ವಹಿಸುವ ಪ್ರಜಾಸತ್ತಾತ್ಮಕ ವ್ಯವಸ್ಥೆಯಾಗಿದೆ. ಸಹಕಾರ ಸಂಘದ ಯಶಸ್ಸು ಸದಸ್ಯರ ಸಂಘದೊಂದಿಗಿನ ಸದಸ್ಯರ ನಿಷ್ಠೆ, ಪ್ರಾಮಾಣಿಕತೆ, ವ್ಯಾವಹಾರಿಕ ಬಾಂಧವ್ಯವನ್ನು ಅವಲಂಭಿಸಿರುತ್ತದೆ. ಸಂಘದ ಸದಸ್ಯರು ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ವ್ಯವಹಾರ ನಡೆಸಿ ಸೇವೆ ಸೌಲಭ್ಯಗಳನ್ನು ಬಳಸಿಕೊಂಡಾಗ ಮಾತ್ರ ಯಾವುದೇ ಸಹಕಾರಿ ಸಂಘ ಅಭಿವೃದ್ಧಿ ಹೊಂದಿ ಉತ್ತುಂಗಕ್ಕೇರಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರಾದ ರಘುಪತಿ ಭಟ್ಟ ನೀರ್ನಳ್ಳಿ, ವಿ.ಡಿ.ಭಟ್ಟ ಊರತೋಟ, ಅರುಂಧತಿ ಹೆಗಡೆ ಗಮಯನಮನೆ, ಎ.ಜಿ.ಭಟ್ಟ ಸುಗಾವಿ, ಶಾರದಾ ಹೆಗಡೆ ಹಲಸನಳ್ಳಿ, ಎಸ್.ಕೆ.ಹೆಗಡೆ ಶೀಗೆಹಳ್ಳಿ, ಶ್ರೀಪಾದ ಹೆಗಡೆ ಶೀಗೆಹಳ್ಳಿ, ಸರಸ್ವತಿ ಹೆಗಡೆ ಕಟ್ಟಿನಹಕ್ಕಲು, ಆರ್.ಎಂ.ಹೆಗಡೆ ಆರಸೀಕೆರೆ, ವಿ.ವಿ.ಹೆಗಡೆ ತಾರಿಗಟ್ಟಿಗೆ, ಎಂ.ಎನ್.ಭಟ್ಟ ವಾಟೆಕೊಪ್ಪ, ಧನಂಜಯ ಹೆಗಡೆ ಶೀಗೆಹಳ್ಳಿ, ಎನ್.ಎಂ.ಹೆಗಡೆ ಉಂಬಳೆಕೊಪ್ಪ, ಬಿ.ಆರ್.ಹೆಗಡೆ ಹಂದಿಮನೆ, ಎಸ್.ಜಿ.ಹೆಗಡೆ ವಾಜಗದ್ದೆ, ಆರ್.ಜಿ.ತೇಲಂಗ, ಶಂಕರ ಹೆಗಡೆ ಹೀಪನಳ್ಳಿ, ಶ್ರೀಪತಿ ಭಟ್ಟ ಕುಳವೆ, ವಿಶ್ವನಾಥ ಹೆಗಡೆ ಕೋಡಸರ, ಮಂಜುನಾಥ ಹೆಗಡೆ ಹೂಡ್ಲಮನೆ, ಸೋಮನಾಥ ಗೌಡ, ಎಸ್.ಆರ್.ಹೆಗಡೆ ಕೋವೆಸರ, ಪದ್ಮನಾಭ ಭಟ್ಟ ನೆಲಮಾಂವ, ಮಹಾಬಲೇಶ್ವರ ಹೆಗಡೆ ಮೂಲೆಮನೆ, ಗಣೇಶ ಹೆಗಡೆ ಗೋಳಗೋಡ, ನರಸಿಂಹ ಕಳವೆ, ಬಂಗಾರೇಶ್ವರ ಹೆಗಡೆ ಅತ್ತಿಮುರಡು, ವೆಂಕಟ್ರಮಣ ಹೆಗಡೆ ನವಿಲಗಾರು, ನಾಗಪತಿ ಹೆಗಡೆ ಭಾವಿಸರ, ಗಜಾನನ ಹೆಗಡೆ ಬಂಡಲ, ಪಿ.ಜಿ.ಹೆಗಡೆ ಶೇಲೂರು, ನರಸಿಂಹ ಹೆಗಡೆ ಜಾನ್ಮನೆ, ಗುರುನಾಥ ಹೆಗಡೆ, ಮಂಜುನಾಥ ಹೆಗಡೆ ಬಳಗಂಡಿ, ಶಾಂತಾರಾಮ ಹೆಗಡೆ ಶಿರಗೋಡ ಬಯಲು, ರಾಮಚಂದ್ರ ಹೆಗಡೆ ಬಿಳೇಕಲ್, ರಾಮಕೃಷ್ಣ ಹೆಗಡೆ, ಮಂಜುನಾಥ ಸೋಮನಳ್ಳಿ, ಮಂಜುನಾಥ ಹೆಗಡೆ ಸುಗಾವಿ, ಗಂಗಾಧರ ಹೆಗಡೆ ಅಜ್ಜಿಬಳ, ರಾಮಚಂದ್ರ ಕಂಪಲಿ, ರಾಮಚಂದ್ರ ಭಟ್ಟ ಧರೆಮನೆ, ವಿಶ್ವನಾಥ ಹೆಗಡೆ, ಪದ್ಮನಾಭ ಹೆಗಡೆ ಚವತ್ತಿ, ಶ್ರೀಪತಿ ಇಸಳೂರು, ವಿಶ್ವನಾಥ ಹೆಗಡೆ ಗಲಗದಮನೆ, ಲಕ್ಷ್ಮೀನಾರಾಯಣ ಹೆಗಡೆ ಕೋಡಗದ್ದೆ, ಮಂಜುನಾಥ ಹೆಗಡೆ ಸೂರನಜಡ್ಡಿ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಸಿ.ಎನ್.ಹೆಗಡೆ, ಶಶಾಂಕ ಹೆಗಡೆ, ಸೀತಾರಾಮ ಹೆಗಡೆ, ಕೃಷ್ಣ ಹೆಗಡೆ, ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಹಾಗೂ ಇತರರು ಇದ್ದರು