ಜೋಯಿಡಾ: ತಾಲೂಕಿನ ನಾಗೋಡಾ ಪಾಂಜೇಲಿ ಬಳಿ ಸೂಪಾ ಜಲಾಶಯದ ಹಿನ್ನೀರಿನಲ್ಲಿ ಮತ್ತೊಂದು ಹೊಸ ಚಟುವಟಿಕೆಯನ್ನು ಆರಂಭಿಸಲು ಅರಣ್ಯ ಇಲಾಖೆ ಮುಂದಾಗಿದೆ. ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಜೊಯಿಡಾದಲ್ಲಿ ಅರಣ್ಯ ಇಲಾಖೆ ಬೋಟಿಂಗ್ ಪರಿಚಯಿಸಿದೆ.ತಾಲೂಕಿನ ಜನರು ಈ ಭಾಗದಲ್ಲಿ ಬೋಟಿಂಗ್ ಪ್ರಾರಂಭಿಸಬೇಕು ಎಂದು ಈ ಹಿಂದೆಯೇ ಬೇಡಿಕೆ ಇಟ್ಟಿದ್ದರು. ಅದು ಈಗ ಕಾರ್ಯರೂಪಕ್ಕೆ ಬಂದAತಾಗಿಗೆ.
ಈ ಸ್ಥಳ ಜೊಯಿಡಾದಿಂದ 10 ಕಿ. ಮೀ. ದೂರದಲ್ಲಿದ್ದು, ನಾಗೋಡಾ ಕ್ರಾಸ್ ನಿಂದ ಪಾಂಜೇಲಿ ಊರಿಗೆ ಸಾಗಬೇಕು. ಅಲ್ಲಿಂದ 800 ಮೀ. ಕಾಲ್ನಡಿಗೆಯಲ್ಲಿ ಸಾಗಿದರೆ ಸೂಪಾ ಜಲಾಶಯದ ಹಿನ್ನೀರು ಕಾಣಸಿಗುತ್ತದೆ. ಬೋಟಿಂಗ್ ಗೆ ಸಾಗಬೇಕಾದರೆ ಒಬ್ಬರಿಗೆ 650 ರೂ. ನ್ನು ಅರಣ್ಯ ಇಲಾಖೆ ನಿಗದಿಪಡಿಸಿದ್ದು, ನಾಗೋಡಾ ಕ್ರಾಸ್ ನಿಂದ ಸಫಾರಿ ವಾಹನದಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿದ್ದಾರೆ. ಒಮ್ಮೆ ಬೋಟಿನಲ್ಲಿ 24 ಜನರು ಸಾಗಬಹುದಾಗಿದೆ.
ಬೋಟಿಂಗ್ ನ ಜೊತೆಗೆ ಹಿನ್ನೀರಿನಲ್ಲಿ ಅದ್ಭುತವಾದ ಆಕರ್ಷಣೀಯ ಪರಿಸರ ಕಾಣ ಸಿಗುತ್ತದೆ. ಸುತ್ತಲೂ ಗುಡ್ಡ- ಬೆಟ್ಟಗಳು, ನೀರಿನ ಮಧ್ಯದಲ್ಲಿ ಸಾಗುತ್ತಿದ್ದರೆ ಸುಂದರ ಅನುಭವ ನೀಡುತ್ತದೆ. ನೀರಿನಲ್ಲಿ ಸಾಗುತ್ತಿರುವಾಗಲೇ ದೂರದ ದಡದಲ್ಲಿ ಕಾಡುಕೋಣ, ಚಿರತೆ, ಜಿಂಕೆ, ಹಾರ್ನಬಿಲ್ ಇನ್ನಿತರ ಪ್ರಾಣಿ- ಪಕ್ಷಿಗಳು ಕಾಣಸಿಗುತ್ತವೆ. ರಜಾ ದಿನಗಳಲ್ಲಿ ಕುಟುಂಬದೊAದಿಗೆ ಪಿಕ್ ನಿಕ್ ಗಾಗಿ ಈ ಸ್ಥಳ ಹೇಳಿ ಮಾಡಿಸಿದಂತಿದೆ.