ಯಲ್ಲಾಪುರ: ರಾತ್ರಿ ಸುರಿದ ಭಾರೀ ಮಳೆಗೆ ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ಬಾಳೆಗದ್ದೆಯಲ್ಲಿ ಅನಂತ ರಾಮಾಸಿದ್ದಿ ಎನ್ನುವವರ ಮನೆಯು ಸಂಪೂರ್ಣ ನೆಲಸಮವಾಗಿಗಿದ್ದು, ಉಳಿಯಲು ಸೂರು ಇಲ್ಲದಂತಾಗಿದೆ.
ಶುಕ್ರವಾರ ಬೆಳಗಿನಜಾವ ನಡೆದ ಈ ಘಟನೆಯಲ್ಲಿ ಅನಂತ ರಾಮಾಸಿದ್ದಿ ಅವರ ಕಾಲಿಗೆ ಪೆಟ್ಟಾಗಿದ್ದು, ಮಂಜುನಾಥ ಸಿದ್ದಿ ಎನ್ನುವವರಿಗೂ ಸಣ್ಣ ಪುಟ್ಟ ಗಾಯಗಳಾಗಿದೆ. ಮನೆಯಲ್ಲಿ ಆರೇಳು ಜನ ವಾಸವಿದ್ದು, ಮನೆ ಕುಸಿಯುತ್ತಿರುವ ಶಬ್ದ ಕೇಳಿ ಕೆಲವರು ಹೊರಗೋಡಿದರೆ, ಅನಂತ ಮತ್ತು ಮಂಜಾ ಸಿದ್ದಿ ಗಾಢನಿದ್ದೆಯಲ್ಲಿ ಇದ್ದುದರಿಂದ ಅವರ ಮೇಲೆಯೇ ಮನೆ ಬಿದ್ದಿತೆಂದು ಹೇಳಲಾಗಿದೆ. ನಂತರ ಅವರನ್ನು ಮನೆಯ ಅವಶೇಷಗಳ ಅಡಿಯಿಂದ ಹೊರ ತೆಗೆಯಲಾಗಿದ್ದು, ಸಧ್ಯ ಯಾವುದೇ ಪ್ರಾಣಾಪಾಯ ಆಗಿಲ್ಲ.
ಮನೆಯೊಳಗಿದ್ದ ಅಕ್ಕಿ, ಬೇಳೆ, ಪಾತ್ರೆಗಳಷ್ಟೇ ಅಲ್ಲದೆ, ಬಟ್ಟೆ-ಬರೆಗಳೂ ಕೂಡ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದೆ. ಸುದ್ದಿ ತಿಳಿದ ತಕ್ಷಣ ಗ್ರಾ.ಪಂ.ಸ್ಥಳೀಯ ಸದಸ್ಯ ಗ.ರಾ.ಭಟ್, ವಿಲೇಜ್ ಅಕೌಂಟೆಂಟ್ ಗಜೇಂದ್ರ ಪಟಗಾರ ಮೊದಲಾದವರು ಸ್ಥಳಕ್ಕೆ ಆಗಮಿಸಿ, ಕಚ್ಚಾ ಮನೆ ಸಂಪೂರ್ಣ ಹಾನಿಯೆಂದು ಪಂಚನಾಮೆ ನಡೆಸಿದ್ದಾರೆ.