ಅಂಕೋಲಾ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಪ್ರಸಕ್ತ ಸಾಲಿನ ಬಿ.ಎ ಮತ್ತು ಬಿ.ಕಾಂ ಅಂತಿಮ ವರ್ಷದ ಫಲಿತಾಂಶ ಪ್ರಕಟಗೊಂಡಿದ್ದು, ಕೆ.ಎಲ್.ಇ ಸೊಸೈಟಿಯ ಕಲಾ ವಿಭಾಗ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಕಲಾ ವಿಭಾದ ಅಂತಿಮ ವರ್ಷದಲ್ಲಿ ಶೇ.96.61 ಫಲಿತಾಂಶ ದಾಖಲಿಸಿದ್ದು, ರಮಾ ಗೌಡ ಶೇ. 84.5 ಅಂಕಗಳಿಸಿ ಪ್ರಥಮ, ರೋಹಿಣಿ ಗೌಡ ಶೇ. 84 ದ್ವಿತೀಯ ಮತ್ತು ಗಾಯತ್ರಿ ಗೌಡ ಶೇ. 82.64 ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದ ಬಿ.ಕಾಂ. ಅಂತಿಮ ವರ್ಷದಲ್ಲಿ ಮಹಾವಿದ್ಯಾಲಯದ ಫಲಿತಾಂಶ ಶೇ. 95.52 ಆಗಿದ್ದು, ವಿದ್ಯಾರ್ಥಿ ಐಶ್ವರ್ಯಾ ನಾಗರಾಜ ಶೆಟ್ಟಿ. ಶೇ. 93.78 ಅಂಕಗಳಿಸಿ ಪ್ರಥಮ, ಪ್ರಮೋದ ಮೋಹನ ನಾಯಕ ಶೇ. 92.07 ದ್ವಿತೀಯ ಮತ್ತು ಆಫ್ರಿನ್ ಅಹಮದ್ ಶೇಖ್ ಶೇ. 91.71 ತೃತೀಯ ಸ್ಥಾನಗಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಕಾರ್ಯದರ್ಶಿ ಡಾ. ಬಿ.ಜಿ.ದೇಸಾಯಿ, ಸ್ಥಾನಿಕ ಆಡಳಿತ ಮಂಡಳಿ ಕಾರ್ಯದರ್ಶಿ ಡಾ. ಡಿ.ಎಲ್.ಭಟ್ಕಳ, ಸಂಯೋಜಕ ಆರ್.ನಟರಾಜ, ಆಡಳಿತಾಧಿಕಾರಿ ಡಾ. ಮಿನಲ್ ನಾರ್ವೇಕರ, ಪ್ರಾಚಾರ್ಯೆ ನಾಗಮ್ಮ ಮಮದಾಪುರ ಹಾಗೂ ಸಿಬ್ಬಂದಿ ವರ್ಗದವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.