ಮುಂಡಗೋಡ: ಪಾಲಕರು ಮಕ್ಕಳ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು ಎಂದು ಡಾ.ಶಿಫಾ ಹೇಳಿದರು.
ಅವರು ತಾಲೂಕಿನ ಪಾಳಾ ಗ್ರಾಮದ ಅಂಗನವಾಡಿ ಕೇಂದ್ರ ನಂ.3ರಲ್ಲಿ ಧಾರವಾಡದ ಕಿಡ್ಸ್ ಸಂಸ್ಥೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಜಂಟಿಯಾಗಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥೆ ಅಧ್ಯಕ್ಷೆ ಪಂಕಜ ಕಲ್ಮಠ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಪೌಷ್ಟಿಕ ಆಹಾರದ ಕುರಿತು ಮಾಹಿತಿ ನೀಡಿ ಶಿಕ್ಷಣದ ಮಹತ್ವ ತಿಳಿಸಿದರು. ಪಾಳಾ ಗ್ರಾ.ಪಂ.ಅಧ್ಯಕ್ಷೆ ರಿಜ್ವಾನಾ ಮಕ್ಕಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು. ಪ್ರಭಾರ ಸಿಡಿಪಿಒ ದೀಪಾ ಬಂಗೇರ ಪೌಷ್ಟಿಕ ಆಹಾರ ಮತ್ತು ಪೆÇೀಸ್ಕೋ ಕುರಿತು ತಿಳಿಸಿದರು.
ಅಂಗನವಾಡಿ ಮೇಲ್ವಿಚಾರಕಿ ಛಾಯಾ ಮೊಗೇರ ಬಾಲ್ಯ ವಿವಾಹ ಹಾಗೂ ವೈಯಕ್ತಿಕ ರಕ್ಷಣೆ ಬಗ್ಗೆ ತಿಳಿಸಿದರು. ಸಿಎಚ್‍ಒ ಅನಿತಾ ವೈಯಕ್ತಿಕ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ 50 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಿಡ್ಸ್ ಸಂಸ್ಥೆ ಸಿಬ್ಬಂದಿ ತಾರಾ ನಿರ್ವಹಿಸಿದರು.