ಕಾರವಾರ: 3 ಕೃಷಿ ಕಾಯ್ದೆ ವಾಪಸ್ ಪಡೆಯುವ ಮೂಲಕ ಕೇಂದ್ರ ಸರಕಾರ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹಿರ್ ಹುಸೇನ್ ಆರೋಪಿಸಿದರು.
ಈ ಬಗ್ಗೆ ಪ್ರಕಟಣೆ ನೀಡಿದ ಅವರು, 3 ಕರಾಳ ಕೃಷಿ ಕಾನೂನುಗಳನ್ನು ಸರ್ಕಾರ ರದ್ದುಗೊಳಿಸುವುದು ಸಂತಸದ ವಿಷಯ. ದೇಶದ ಎಲ್ಲಾ ರೈತರಿಗೆ ಹಾಗೂ ರೈತ ಪರ ಹೋರಾಟಗಾರರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತ, ಈ ಕರಾಳ ಕಾನೂನುಗಳು ರೈತ ವಿರೋಧಿ ಆಗಿದೆ ಎಂದು ಸರ್ಕಾರಕ್ಕೆ ಕೂಡಗೊತ್ತಿದ್ದು, ಸರ್ಕಾರ ಇದನ್ನು ರದ್ದುಗೊಳಿಸಲು ಇಷ್ಟೊಂದು ತಡಮಾಡಿ ಸುಮಾರು 900 ಕ್ಕಿಂತ ಹೆಚ್ಚು ರೈತರ ಜೀವ ಬಲಿದಾನ ಪಡೆದಿದೆ. ಇದು ಅತ್ಯಂತ ಖಂಡನೀಯ.
ಇದೀಗ ಚುನಾವಣೆಗಳನ್ನು ಮುಂದಿಟ್ಟುಕೊಂಡು ಸರ್ಕಾರ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಮಾಡಿದೆ. ಕಾಪೆರ್Çರೇಟ್ ಶಕ್ತಿಗಳಿಗೆ ಸಂತೋಷಪಡಿಸಲು ರೈತರ ಬಲಿದಾನ ಪಡೆದು ಈಗ ಮತ್ತೆ ಚುನಾವಣೆ ಬಂದಾಗ ಮತದಾರರನ್ನು ಸೆಳೆಯಲು ಈ ರೀತಿಯ ನೀಚ ರಾಜಕೀಯ ಬಿಜೆಪಿ ಮಾಡುತ್ತ ಇರುವಂಥದ್ದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಹೋರಾಟ ನ್ಯಾಯ ಪರವಾಗಿದ್ದು, ಒಂದು ದಿನ ಅದರ ಫಲ ದೊರಕಲೇ ಬೇಕಾಗಿತ್ತು. ಹಾಗಾಗಿ ಹಿಂದೂ ಸರಕಾರತನ್ನರಾಜಕೀಯಲಾಭಕ್ಕಾಗಿ ಈ ಕಾನೂನುಗಳನ್ನು ಹಿಂಪಡೆಯುವುದು ಸರಿ. ಇದುರೈತರ ನಿರಂತರವಾದ ಹೋರಾಟಕ್ಕೆ ಸಿಕ್ಕಿರುವಂತಹ ಫಲ ಎಂದುಅವರು ಹೇಳಿದರು.
ಕೃಷಿ ಕಾಯ್ದೆಯಷ್ಟೇ ಅಲ್ಲ, ಕೇಂದ್ರ ಬಿಜೆಪಿ ಸರ್ಕಾರದ ಪ್ರತಿಯೊಂದು ನೀತಿ ಮತ್ತು ಕಾರ್ಯಕ್ರಮಗಳು ರೈತ ವಿರೋಧಿಯಾದುದು. ಇದು ವಿರಮಿಸುವ ಕಾಲ ಅಲ್ಲ, ರೈತ ವಿರೋಧಿ ಬಿಜೆಪಿ ವಿರುದ್ಧದ ಹೋರಾಟ ಮುಂದುವರಿಯಲಿದೆ.
ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರುದ್ಧದ ಜನ ಹೋರಾಟಕ್ಕೆ ನಾಂದಿಯಾಗಲಿದೆ. ಪೆಟ್ರೋಲ್-ಡೀಸೆಲ್ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆ ವಿರುದ್ಧದ ಹೋರಾಟಕ್ಕೆ ದೇಶದ ಜನ ಅಣಿಯಾಗಿದ್ದಾರೆ. ಜನ ವಿರೋಧಿ ಕಾಯ್ದೆಗಳನ್ನು ವಿರೋಧಿಸೋಣ ಮತ್ತು ಸರ್ಕಾರ ಎಚ್ಚರಗೊಳಿಸುವ ಪ್ರಯತ್ನ ಮುಂದುವರಿಸೋಣ ಎಂದು ಕರೆಕೊಟ್ಟರು.