• Slide
  Slide
  Slide
  previous arrow
  next arrow
 • ಅರಣ್ಯ ಇಲಾಖೆ ದಾಳಿ; ಜಿಂಕೆ ಚರ್ಮ-ಮಾಂಸ ವಶಕ್ಕೆ- ಆರೋಪಿತರು ನಾಪತ್ತೆ

  300x250 AD

  ಮುಂಡಗೋಡ: ಜಿಂಕೆಯನ್ನು ಬೇಟೆಯಾಡಿ ಮಾಂಸ ಹಂಚಿಕೊಳ್ಳುತ್ತಿದ್ದಾಗ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆಯವರು ದಾಳಿ ನಡೆಸಿ ಜಿಂಕೆಯ ಮಾಂಸ ಹಾಗೂ ಚರ್ಮವನ್ನು ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದ ನಾಲ್ಕು ಜನ ಆರೋಪಿಗಳು ನಾಪತ್ತೆಯಾದ ಘಟನೆ ತಾಲೂಕಿನ ಮುಡಸಾಲಿ ಗ್ರಾಮದಲ್ಲಿ ಶುಕ್ರವಾರ ಜರುಗಿದೆ.


  ಮುಡಸಾಲಿ ಗ್ರಾಮದ ಪೀರಣ್ಣ ಟೋಪೋಜಿ, ನಾಗೇಂದ್ರ ಟೋಪೋಜಿ, ಲಕ್ಷ್ಮಣ ತಡಸದ ಹಾಗೂ ಪುಂಡಲಿಕ ಟೋಪೋಜಿ ಎಂಬುವರು ಪರಾರಿಯಾದ ಆರೋಪಿಗಳಾಗಿದ್ದಾರೆ. ಇವರು ನಾಲ್ಕು ಜನರು ಸೇರಿಕೊಂಡು ಅರಣ್ಯದಲ್ಲಿ ಜಿಂಕೆಯನ್ನು ಬೇಟೆಯಾಡಿ ಮುಡಸಾಲಿಯಲ್ಲಿ ಮಾಂಸವನ್ನು ಹಂಚಿಕೊಳ್ಳುವ ಉದ್ದೇಶದಿಂದ ಚರ್ಮವನ್ನು ಬೇರ್ಪಡಿಸುತ್ತಿರುವಾಗ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆಯವರು ದಾಳಿ ನಡೆಸಿದ್ದಾರೆ. ಸುಳಿವು ಸಿಕ್ಕ ಆರೋಪಿಗಳು ಮಾಂಸ ಚರ್ಮವನ್ನು ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದಾರೆ ಎಂದು ಉಪವಲಯ ಅರಣ್ಯಾಧಿಕಾರಿ ನಾಗರಾಜ ಕಲಾಲ ತಿಳಿಸಿದ್ದಾರೆ. ಮಾಂಸ, ಚರ್ಮವನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆಯವರು ನಾಪತ್ತೆಯಾದ ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದಾರೆ.

  300x250 AD


  ಎ.ಸಿ.ಎಫ್ ಎಸ್.ಎಂ.ವಾಲಿ, ಆರ್.ಎಫ್.ಓ ಅಜಯ ನಾಯ್ಕ ಅವರ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ನಾಗರಾಜ ಕಲಾಲ, ಸಿಬ್ಬಂದಿಗಳಾದ ಮಲ್ಲನಗೌಡ ಪಾಟೀಲ, ಬಸನಗೌಡ ಬಿರಾದಾರ, ವಿದ್ಯಾಶ್ರೀ ಜಾಧವ, ಅಶೋಕ ಕೋಳ್ಳೆರ, ಸಹದೇವ ಪವಾರ, ರಾಜೇಸಾಬ ಹುಬ್ಬಳ್ಳಿ, ಗಣಪತಿ ಹಿರಳ್ಳಿ, ಶಂಭು ಆರೇಗೋಪ್ಪ ಪರಶುರಾಮ, ವಿಶಾಲ ಸೇರಿದಂತೆ ಮುಂತಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top