ಶಿರಸಿ: ಕೋವಿಡ್ ನಿಯಂತ್ರಣಕ್ಕೆ ಲಾಕ್‍ಡೌನ್ ನಿಯಮಾವಳಿ ಅಂತಿಮ ಪರಿಹಾರ ಅಲ್ಲದಿದ್ದರೂ, ಸರ್ಕಾರವು ಸಮರ್ಪಕವಾಗಿ ಕೊರೋನಾ ನಿಯಂತ್ರಿಸುವಲ್ಲಿ ವಿಫಲವಾಗಿರುವುದರಿಂದ ಹರಡುವಿಕೆಯ ‘ಮಧ್ಯಂತರ ನಿಯಂತ್ರಣ’ ಕ್ಕೆ ತುರ್ತು ಅಲ್ಪಾವಧಿಯ ಲಾಕ್‍ಡೌನ್ ಅನಿವಾರ್ಯವಾಗಿದೆ ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಅವರು ಮುಖ್ಯಮಂತ್ರಿಗೆ ಆಗ್ರಹಿಸಿದ್ದಾರೆ.
ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಗಳಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಾ ಕೊರೋನಾ ನಿಯಂತ್ರಣದಲ್ಲಿ ಸಮರ್ಪಕ ನಿಯಮಾವಳಿ ಜರುಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಏಕಾಏಕಿಯಾಗಿ ಏ. 4 ರಂದು ಕೊರೋನಾ ನಿಯಂತ್ರಣ ಮತ್ತು ನಿಯಮಾವಳಿಗಳನ್ನು ರಚಿಸುವ ಜವಾಬ್ದಾರಿ ಉಸ್ತುವಾರಿ ಸಚಿವರಿಗೆ ನೀಡಿರುವುದರಿಂದ ಆಡಳಿತಾತ್ಮಕ, ಅವೈಜ್ಞಾನಿಕವಾಗಿ ಲಾಕಡೌನ್ ಸಡಿಲಿಕೆಯು ಇಂದು ಕೊರೋನಾವು ಸಮೂಹ ಹಂತಕ್ಕೆ ಹರಡುವಿಕೆಯ ಆತಂಕದಲ್ಲಿ ಜನಸಾಮಾನ್ಯರಿದ್ದಾರೆ ಎಂದು ಅವರು ತಿಳಿಸಿದ್ದಾರೆ.
300×250 AD
ಆಶಾ, ಅಂಗನವಾಡಿ ಮತ್ತು ಇತರೆ ವಾರಿಯರ್ಸಗೆ ಆರೋಗ್ಯ ರಕ್ಷಣೆಯ ಕನಿಷ್ಟ ಸೌಲಭ್ಯದಿಂದ ಇತ್ತೀಚೆಗೆ ವಂಚಿತರಾಗುತ್ತಾ, ಕೊರೋನಾ ವೇದಿಕೆಯ ಪರೀಕ್ಷೆಯ ವರದಿಗೆ ಕನಿಷ್ಟ ಕಾಲಮಿತಿ ನಿಗದಿಯಾಗದೇ ವೈದ್ಯಕೀಯ ಫಲಿತಾಂಶಕ್ಕಾಗಿ 5-6 ದಿನಗಳು ವಿಳಂಬವಾಗುತ್ತಿದ್ದು, ಸ್ವಘೋಷಿತ ಅರ್ಧ ದಿನದ ಘೋಷಣೆಯ ನಂತರದ ಅವಧಿಯಲ್ಲಿ ಅಸಮರ್ಪಕ ನಿಯಮಾವಳಿ ಜನಸಾಮಾನ್ಯರು ಪಾಲಿಸುತ್ತಿರುವುದರಿಂದ, ಕೊರೋನಾ ಪ್ರಾರಂಭವಾಗಿದ್ದು 4 ತಿಂಗಳುಗಳು ಸಮೀಪಿಸುತ್ತಿದ್ದರೂ ಸರ್ಕಾರ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲತೆ ಎದ್ದು ಕಾಣುತ್ತರುವುದು ವಿಷಾದಕರ ಎಂದು ಪ್ರಕಟಣೆಯಲ್ಲಿ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ದಿನಕ್ಕೆ 600 ಪರೀಕ್ಷಾ ವರದಿ: ಇತ್ತೀಚೆಗೆ ಕೊರೋನಾ ವೈದ್ಯಕೀಯ ಪರೀಕ್ಷೆ ಜಿಲ್ಲೆಯಲ್ಲಿಯೇ ಪರೀಕ್ಷಿಸುವುದು ಸ್ವಾಗತಾರ್ಹವಾಗಿದ್ದರೂ ಪರೀಕ್ಷೆ ಪ್ರಮಾಣ ಕೇವಲ 600 ಕ್ಕೆ ಸೀಮಿತವಾಗಿರುವುದನ್ನು ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸುವಿಕೆಯೊಂದಿಗೆ, ಒಂದೇ ದಿನದಲ್ಲಿ ಫಲಿತಾಂಶ ಬಂದಲ್ಲಿ ಹರಡುವಿಕೆಯ ಪ್ರಮಾಣ ಕಡಿಮೆ ಆಗುವುದರಿಂದ ಪರೀಕ್ಷೆಯ ಸಾಮಥ್ರ್ಯವನ್ನು ಹೆಚ್ಚಿಸಬೇಕೆಂದು ರವೀಂದ್ರ ನಾಯ್ಕ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ.