ಕಾರವಾರ: ಶ್ರೀ ಮಹಾದೇವ ದೇವಸ್ಥಾನದ ಪ್ಲವ ನಾಮ ಸಂವತ್ಸರ ಕಾರ್ತಿಕ ಮಾಸದಲ್ಲಿ ನಡೆಯುವ ಕಾರ್ತಿಕೋತ್ಸವ ಅತ್ಯಂತ ಅದ್ದೂರಿಯಾಗಿ ನಡೆಯಿತು.
ಈ ಉತ್ಸವವು ಕಾರ್ತಿಕ ಹುಣ್ಣಿಮೆಯಂದು ದೇವರ ವಿಶೇಷ ಪೂಜೆಯೊಂದಿಗೆ ಆರಂಭವಾಗಿ, ದೇವರ ಉತ್ಸವ ಮೂರ್ತಿಯು ಪಲ್ಲಕ್ಕಿಯೊಂದಿಗೆ ನಗರದ ವಿವಿಧ ಭಾಗ ಮತ್ತು ದೇವಸ್ಥಾನಗಳಿಗೆ ಭೇಟಿ ನೀಡುತ್ತ ಜನರಿಗೆ ತನ್ನ ದರ್ಶನವನ್ನು ಶ್ರೀದೇವರು ನೀಡುತ್ತಾರೆ. ಇದೇ ಸಂದರ್ಭದಲ್ಲಿ ಸಾಯಂಕಾಲದಲ್ಲಿ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ವನಭೋಜನ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾಪೂರ್ವಕವಾಗಿ ಆಚರಣೆ ಮಾಡಲಾಯಿತು. ಪುರಾತನ ಕಾಲದಿಂದ ಕಳಸ ಮತ್ತು ಚಿಪ್ಕರ್ ಕುಟುಂಬವು ದೇವರ ಪಲ್ಲಕ್ಕಿ ಸೇವೆಯನ್ನು ಅತ್ಯಂತ ಶ್ರದ್ಧಾಪೂರ್ವಕವಾಗಿ ನೀಡುತ್ತ ಕೃತಜ್ಞರಾಗುತ್ತಾರೆ.
ಈ ಕಾರ್ಯಕ್ರಮವು ಕಾರ್ತಿಕ ಹುಣ್ಣಿಮೆಯ ಎರಡನೇ ದಹಿಕಾಲ ಉತ್ಸವದ ನಂತರ ಪವಿತ್ರ ಸಮುದ್ರ ಸ್ನಾನದ ಬಳಿಕ ಸಂಪನ್ನಗೊಳ್ಳುತ್ತದೆ.