ಕಾರವಾರ: ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ 2021-22 ನೇ ಸಾಲಿನ ಸಫಾಯಿ ಕರ್ಮಚಾರಿ, ಪೌರ ಕಾರ್ಮಿಕ ಹಾಗೂ ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಗಳ ನೊಂದಾಯಿತ ಸಂಘ ಸಂಸ್ಥೆಗಳಿಗೆ ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರಗಳನ್ನು ಖರೀದಿಸಲು ಶೇ.75 ರಷ್ಟು ಸಹಾಯಧನ ಹಾಗೂ ಸಫಾಯಿ ಕರ್ಮಚಾರಿ ಮಕ್ಕಳಿಗೆ 9 ರಿಂದ ದ್ವೀತಿಯ ಪಿಯುಸಿ ವರೆಗಿನ ಆನ್‍ಲೈನ್ ಪಾಠ ಕೇಳಲು ಹಾಗೂ ವಿಧ್ಯಾಭ್ಯಾಸ ಅನುಕೂಲಕ್ಕಾಗಿ ಟ್ಯಾಬ್‍ಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಡಿಸೆಂಬರ್ 15ರ ವರೆಗೆ ವಿಸ್ತರಿಸಲಾಗಿದೆ.
ಆಸಕ್ತರು ನಿಗಮದ ವೆಬ್‍ಸೈಟ್ www.ksskdc.kar.nic.in ನಲ್ಲಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಡೌನ್‍ಲೋಡ್ ಮಾಡಿಕೊಂಡು ಸೂಕ್ತ ದಾಖಲಾತಿಗಳೊಂದಿಗೆ ಡಿಸೆಂಬರ್ 15 ರೊಒಳಗೆ ಜಿಲ್ಲಾ ಕಛೇರಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮ, ನೆಲಮಹಡಿ ತಹಶೀಲ್ದಾರ ಕಚೇರಿ ಹಿಂದುಗಡೆ, ಎಂ.ಜಿ ರಸ್ತೆ, ಕಾರವಾರ- 581301 ದೂರವಾಣಿ ಸಂಖ್ಯೆ: 08382-226903 ಸಂಪರ್ಕಿಸಬಹುದು ಎಂದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕಿ ವಿಮಲಾ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.