• first
    second
    third
    previous arrow
    next arrow
  • ನ. 22 ಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳ ಆಯ್ಕೆ ಪೂರ್ವ ಪರೀಕ್ಷೆ

    300x250 AD

    ಕಾರವಾರ: ಜಿಲ್ಲಾ ಪಂಚಾಯತ ವತಿಯಿಂದ ಅಲ್ಪಸಂಖ್ಯಾತ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಆಧೀನದಲ್ಲಿ ಬರುವ ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ಪ್ರವೇಶ ಪಡೆದ ಎಲ್ಲಾ ಆಸಕ್ತ ವಿದ್ಯಾರ್ಥಿಗಳು ಉತ್ತಮವಾಗಿ ಬದುಕು ಕಟ್ಟಿಕೊಳ್ಳಲಿ ಎಂಬ ಉದ್ದೇಶದಿಂದ ವಿವಿಧ ಮಾದರಿಯ ಕೋರ್ಸ್‍ಗಳ ಮಾರ್ಗದರ್ಶನ ಹಾಗೂ ಐಎಎಸ್, ಐಪಿಎಸ್, ಕೆಎಎಸ್, ಬ್ಯಾಂಕಿಂಗ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳ ತಿಳುವಳಿಕೆ ನೀಡಲು ನ. 22 ರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 12.30 ರವರೆಗೆ ಆಯ್ಕೆ ಪೂರ್ವ ಪರೀಕ್ಷೆ ನಡೆಸಲಾಗುತ್ತಿದೆ.


    ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು, ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಸಂಬಂಧಪಟ್ಟ ಇಲಾಖೆಯ ತಾಲೂಕಾ ವಿಸ್ತರಣಾಧಿಕಾರಿಗಳ ಕಾರ್ಯಾಲಯಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ತಿಳಿಸಿದ್ದಾರೆ.

    300x250 AD

    ಪರೀಕ್ಷಾ ಕೇಂದ್ರಗಳು: ಅಂಬೇಡ್ಕರ ವಸತಿ ಶಾಲೆ ಶಿರವಾಡ, ಕಾರವಾರ, ರಾಣಿಚನ್ನಮ್ಮಾ ವಸತಿ ಶಾಲೆ ಅಂಕೋಲಾ, ಮುರಾರ್ಜಿದೇಸಾಯಿ ವಸತಿ ಶಾಲೆ ಹೆಗಡೆ ಕುಮಟಾ, ಇಂದಿರಾಗಾಂಧಿ ವಸತಿ ಶಾಲೆ ಕರ್ಕಿನಾಕಾ ಹತ್ತಿರ ಹೊನ್ನಾವರ, ರಾಣಿಚನ್ನಮ್ಮಾ ವಸತಿ ಶಾಲೆ ಪುರವರ್ಗ ಭಟ್ಕಳ, ಅಂಬೇಡ್ಕರ ವಸತಿ ಶಾಲೆ ಇಸಳೂರು ಶಿರಸಿ, ರಾಣಿಚನ್ನಮ್ಮಾ ವಸತಿ ಶಾಲೆ ಕವಂಚೂರು ಸಿದ್ದಾಪುರ, ಮುರಾರ್ಜಿದೇಸಾಯಿ ವಸತಿ ಶಾಲೆ ಯಲ್ಲಾಪುರ, ಮುರಾರ್ಜಿದೇಸಾಯಿ ವಸತಿ ಶಾಲೆ ಕೆರಗಿನಕೊಪ್ಪಾ ಮುಂಡಗೋಡ, ಇಂದಿರಾಗಾಂಧಿ ವಸತಿ ಶಾಲೆ ಹಳಿಯಾಳ, ಮುರಾರ್ಜಿದೇಸಾಯಿ ವಸತಿ ಶಾಲೆ ಜೊಯಿಡಾ.

    Share This
    300x250 AD
    300x250 AD
    300x250 AD
    Back to top