ಭಟ್ಕಳ: ರೈತರ ಅನುಕೂಲ, ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಅದನ್ನು ಸಮರ್ಪಕವಾಗಿ ರೈತರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕಿದೆ ಎಂದು ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.
ಅವರು ಮುರ್ಡೇಶ್ವರದ ಬಸ್ತಿಮಕ್ಕಿ ಹವ್ಯಕ ಸಭಾಭವನದಲ್ಲಿಉತ್ತರಕನ್ನಡಜಿಲ್ಲಾ ಬಿಜೆಪಿ ರೈತಮೋರ್ಚಾ ವತಿಯಿಂದ ಉತ್ತರಕನ್ನಡ ಹಾಗೂ ಉಡುಪಿ ಜಿಲ್ಲೆಯ ರೈತ ಮೋರ್ಚಾ ಪದಾಧಿಕಾರಿಗಳ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಪ್ರಸನ್ನಕೆರೆಕೈ ಪ್ರಾಸ್ತಾವಿಕ ಮಾತನಾಡಿ, ರೈತ ಮೋರ್ಚಾ ಸಭೆಯನ್ನು ಆಯೋಜಿಸುವ ಉದ್ದೇಶವನ್ನು ವಿವರಿಸಿದರು.
ರೈತ ಮೋರ್ಚಾರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ರೈತ ಮೋರ್ಚಾ ಸಂಘಟನಾತ್ಮಕ ವಿಚಾರಗಳ ಬಗ್ಗೆ ವಿವರಿಸಿದರು. ಉತ್ತರಕನ್ನಡಜಿಲ್ಲಾರೈತ ಮೋರ್ಚಾ ವತಿಯಿಂದರಾಜ್ಯಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಉಡುಪಿ ಜಿಲ್ಲಾರೈತಮೋರ್ಚಾಜಿಲ್ಲಾಧ್ಯಕ್ಷ ಪ್ರದೀಪ್ ಗುನಗಿ, ಶಾಸಕ ಸುನೀಲ್ ನಾಯ್ಕ, ವಿಭಾಗ ಸಹ ಪ್ರಭಾರಿಗಳಾದ ಎನ್.ಎಸ್. ಹೆಗಡೆ, ರಾಜ್ಯರೈತಮೋರ್ಚಾಉಪಾಧ್ಯಕ್ಷ ಎ.ವಿ.ತೀರ್ಥರಾಮ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗೋವಿಂದ ನಾಯ್ಕ, ರೈತ ಮೋರ್ಚಾ ಪ್ರಭಾರಿಗೋಪಾಲಕೃಷ್ಣ ವೈದ್ಯ, ಭಟ್ಕಳ ಬಿಜೆಪಿ ಅಧ್ಯಕ್ಷ ಸುಬ್ರಾಯದೇವಾಡಿಗ ಮುಂತಾದವರಿದ್ದರು. ರಾಜ್ಯ, ಉತ್ತರಕನ್ನಡ ಹಾಗೂ ಉಡುಪಿ ಜಿಲ್ಲಾ ಹಾಗೂ ಮಂಡಲದರೈತ ಮೋರ್ಚಾ ಪದಾಧಿಕಾರಿಗಳು ಹಾಜರಿದ್ದರು.
ರೈತಮೋರ್ಚಾಜಿಲ್ಲಾಧ್ಯಕ್ಷ ಮಹೇಶ್ ಹೊಸಕೊಪ್ಪ ಸ್ವಾಗತಿಸಿದರು. ರೈತ ಮೋರ್ಚಾಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಷ್ಣುಮೂರ್ತಿ ಹೆಗಡೆ ವಂದಿಸಿದರು. ಉತ್ತರಕನ್ನಡರೈತ ಮೋರ್ಚಾಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮ್‍ಕುಮಾರ್ ನಿರೂಪಿಸಿದರು.