ಕಾರವಾರ: ತೀವ್ರ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್ತಿನ ಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿಯಾಗಿ ಕಾರವಾರದ ಗಣಪತಿ ಉಳ್ವೇಕರ್ ಹೆಸರು ಅಧಿಕೃತವಾಗಿ ಹೊರಬಿದ್ದಿದೆ.
ಡಿ.10 ರಂದು ವಿ. ಪರಿಷತ್ ಚುನಾವಣೆ ನಡೆಯಲಿದ್ದು, ಗಣಪತಿ ಉಳ್ವೇಕರ್ ಬಿಜೆಪಿಯಿಂದ ಈ ಹಿಂದೆ ಸ್ಪರ್ಧಿಸಿ, ಕೆಲವೇ ಮತಗಳ ಅಂತರದಿಂದ ಸೋಲನ್ನು ಕಂಡಿದ್ದರು. ಈ ಬಾರಿ ಪಕ್ಷದಿಂದ ಮತ್ತೆ ಅವಕಾಶ ನೀಡಿದ್ದು, ಕಾಂಗ್ರೆಸ್ ನಿಂದ ಅಭ್ಯರ್ಥಿ ಇನ್ನೂ ಖಚಿತವಾಗಿಲ್ಲ.