ಶಿರಸಿ: ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಶ್ರೀ ಸೋಂದಾ ಸ್ವರ್ಣವಲ್ಲಿ ಮಠ ಇವರ ಆಶಯ ಹಾಗೂ ಆದೇಶದಂತೆ ಶಿರಸಿ ಲಯನ್ಸ ಶಾಲೆಯಲ್ಲಿ ನ.16 ಮಂಗಳವಾರದಿಂದ ಆರಂಭವಾದ ಶ್ರೀಮದ್ಭಗವದ್ಗೀತಾ ಪಠಣದ ಅಭಿಯಾನವು ನ.18 ಗುರುವಾರದಂದು ಸಂಪನ್ನಗೊಂಡಿತು.
ಶಿರಸಿ ನಗರ ಮಾತೃ ಮಂಡಳಿಯ ಅಧ್ಯಕ್ಷರಾದ ಸುನಂದಾ ಭಟ್, ಕಾರ್ಯದರ್ಶಿಗಳಾದ ಹೇಮಾ ಹೆಗಡೆ, ಉಪಾಧ್ಯಕ್ಷರಾದ ಅನಿತಾ ಹೆಗಡೆ, ಮಾತೃ ಮಂಡಳಿಯ ಸದಸ್ಯರಾದ ಸೀತಾ ಕೂರ್ಸೆ ಇವರುಗಳು ಉಪಸ್ಥಿತರಿದ್ದು ಲಯನ್ಸ್ ಶಾಲೆಯ – ಐದನೇ ವರ್ಗದ ವಿದ್ಯಾರ್ಥಿಗಳಿಂದ 9ನೇ ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಸಾಮೂಹಿಕವಾಗಿ ಭಗವದ್ಗೀತೆಯ ಮೂರನೇ ಅಧ್ಯಾಯವನ್ನು ಪಠಣ ಮಾಡಿಸುವುದರ ಮೂಲಕ ಶ್ರೀ ಭಗವದ್ಗೀತಾ ಅಭಿಯಾನವನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟರು.
ನ.16 ಮಂಗಳವಾರದಂದು ಲಯನ್ಸ್ ಶಾಲೆಯ ಸಭಾಂಗಣದಲ್ಲಿ ದೀಪ ಬೆಳಗುವುದರ ಮೂಲಕ ಸರಳವಾಗಿ ಕಾರ್ಯಕ್ರಮವನ್ನು ಆರಂಭ ಮಾಡಲಾಯಿತು. ಶಾಲೆಯ ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ಅವರು ಸ್ವಾಗತಿಸಿದರು. ಅವರು ಮಾತನಾಡುತ್ತಾ, ಭಗವದ್ಗೀತಾ ಪಠಣದ ಔಚಿತ್ವವನ್ನು, ಮಹತ್ವವನ್ನು ತಿಳಿಸಿಕೊಡುತ್ತ- ವಿದ್ಯಾರ್ಥಿಗಳಿಗೆ ಏಕಾಗ್ರತೆಯಿಂದ, ಶ್ರದ್ಧೆಯಿಂದ ವಾಚಿಸಲು ಸೂಚಿಸಿ ಪ್ರತಿನಿತ್ಯವೂ ಬೆಳಗಿನ ಶಾಲಾ ಅವಧಿ ಆರಂಭವಾಗುವುದಕ್ಕೂ ಮೊದಲು ಭಗವದ್ಗೀತೆಯ ಪಠಣವಾಗಬೇಕೆಂದು ತಿಳಿಸಿದರು. ಶಾಲೆಯ ಇತರ ಶಿಕ್ಷಕಿಯರು ಭಗವದ್ಗೀತಾ ಪಠಣದಲ್ಲಿ ಪಾಲ್ಗೊಂಡರು. ಸಹಶಿಕ್ಷಕಿ ಸೀತಾ ವಿ.ಭಟ್ ವಂದಿಸಿದರು.