ಮುಂಡಗೋಡ: ವಿಧಾನಪರಿಷತ ಚುನಾವಣೆ ಅಂಗವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರ ನೇತೃತ್ವದಲ್ಲಿ ಯಲ್ಲಾಪುರ ಪಟ್ಟಣ ಈಶ್ವರಿ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಿದ್ದ ‘ಜನಸ್ವರಾಜ್ ಸಮಾವೇಶ’ ಕಾರ್ಯಕ್ರಮವನ್ನು ಮುಗಿಸಿ ಹಾವೇರಿಗೆ ತೆರಳುತ್ತಿದ್ದ ಸಾರಿಗೆ ಸಚಿವ ಶ್ರೀರಾಮಲು ಅವರು ಮಾರ್ಗಮಧ್ಯೆ ಮುಂಡಗೋಡ ಪಟ್ಟಣದ ಕರ್ಮಾ ಫೌಂಡೇಶನ್ ಕಾರ್ಯಾಲಯಕ್ಕೆ ಭೇಟಿ ನೀಡಿ ಮುಖ್ಯಸ್ಥ ಚಂಬಾ ಅವರಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಪಿಎಸ್‍ಐ ಬಸವರಾಜ ಮಬನೂರ, ವಿಕಾಸ ಶೆಟ್ಟರ, ಕರ್ಮಾ ಫೌಂಡೇಶನ ಸಿಬ್ಬಂದಿಗಳು ಉಪಸ್ಥಿತರಿದ್ದರು.