ಮುಂಡಗೋಡ: ಎದುರುನಿಂದ ಬಂದ ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಚಾಲಕ ಮರಕ್ಕೆ ಡಿಕ್ಕಿ ಹೊಡೆದು ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವ ಸಾವು-ನೋವು ಸಂಭವಿಸದೆ ಪ್ರಾಣಾಪಾಯದಿಂದ ಪಾರಾದ ಘಟನೆ ಶಿರಸಿ-ಹುಬ್ಬಳ್ಳಿ ಮುಖ್ಯ ರಸ್ತೆಯ ಸಾಲಗಾಂವ ಹತ್ತಿರ ಜರುಗಿದೆ.
ಶಿರಸಿಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಬಸ್ ಸಾಲಗಾಂವ ಗ್ರಾಮದ ಕ್ರಾಸ್‍ನಲ್ಲಿ ಬಸ್ಸಿನ ಎದುರುನಿಂದ ಏಕಾಏಕಿ ಬೈಕ್ ಸವಾರ ಮೈಮೇಲೆ ಬಂದ ತಕ್ಷಣ ಬಸ್ ಚಾಲಕ ಅಪಘಾತ ತಪ್ಪಿಸಲು ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವ ಸಾವು-ನೋವು ಆಗಿಲ್ಲ. ಈ ಅವಘಡದಿಂದ ಬಸ್ಸಿನಲಿದ್ದ ಪ್ರಯಾಣಿಕರು ಕೆಲ ಹೊತ್ತು ತೊಂದರೆ ಅನುಭವಿಸುವಂತಾಯಿತು.