ಯಲ್ಲಾಪುರ: ತಾಲೂಕಿನ ವಜ್ರಳ್ಳಿಯ ಶೆಳೆಮನೆಯ ಸುರೇಂದ್ರ ರಾಮಯ್ಯ ಶೇರುಗಾರ ದಾಂಡೇಲಿಯ ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಗುರುವಾರ ಸಂಭವಿಸಿದ ಆಕಸ್ಮಿಕ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯ ತೀವ್ರನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಸುರೇಂದ್ರ ಶೇರುಗಾರ ಉತ್ತಮ ಕ್ರೀಡಾಪಟುವಾಗಿದ್ದು, ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತನಾಗುವ ಮೂಲಕ ಯುವ ಸಮೂಹಕ್ಕೆ ಮಾದರಿಯಾಗಿದ್ದಾನೆ.
ಆತನ ಹೆಚ್ಚಿನ ಚಿಕಿತ್ಸೆಗಾಗಿ 15ರಿಂದ 20 ಲಕ್ಷ ರೂ ವೆಚ್ಚ ತಗುಲಲಿದ್ದು ಬಡ ಕುಟುಂಬವಾದುದರಿಂದ ಮಾನವೀಯತೆಯ ನೆಲೆಯಲ್ಲಿ ಆರ್ಥಿಕ ಸಹಾಯ ಮಾಡಲಿಚ್ಛಿಸುವವರು ಆತನ ಸಹೋದರ ನರೇಶ ರಾಮಯ್ಯ ಶೇರುಗಾರ ರವರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯಲ್ಲಾಪುರ ಶಾಖೆ ಎಸ್‍ಬಿಆಯ್‍ಎನ್ 0001315 ಖಾತೆ ಸಂಖ್ಯೆ 33372968019 ಅಥವಾ ಫೆÇೀನ್ ಫೇ ಮೂಲಕವಾದರೆ 8762103787 ಗೆ ಸಹಾಯವನ್ನು ಸಂದಾಯ ಮಾಡಬಹುದು.