ಶಿರಸಿ: ಲಯನ್ಸ್ ಕ್ಲಬ್ ಶಿರಸಿ, ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆ, ಲಿಯೋ ಕ್ಲಬ್‍ಗಳು, ಶಿರಸಿ, ಇವುಗಳ ಸಂಯುಕ್ತ ಆಶ್ರಯದಲ್ಲಿ ಲಯನ್ಸ್ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ನ.23 ಮಂಗಳವಾರ ಸಂಜೆ 5 ಗಂಟೆಯಿಂದ ನಡೆಯಲಿದೆ.
ಮುಖ್ಯ ಅತಿಥಿಗಳು ಮತ್ತು ಭಾಷಣಕಾರರಾಗಿ ಖ್ಯಾತ ರಂಗ ತಜ್ಞ ಡಾ. ಶ್ರೀಪಾದ್ ಭಟ್ ಆಗಮಿಸುವರು. ಅವರು ಕನ್ನಡದ ಶ್ರೇಷ್ಠತೆ, ಯುವ ಪೀಳಿಗೆಯಲ್ಲಿ ಕನ್ನಡ ಜಾಗೃತಿ ಬಗ್ಗೆ ಮಾತನಾಡಲಿದ್ದಾರೆ. ಲಯನ್ಸ್ ಕ್ಲಬ್, ಶಿರಸಿ, ಉಪಾಧ್ಯಕ್ಷ ಎಂ.ಜೆ.ಎಫ್. ಲಯನ್ ತ್ರಿವಿಕ್ರಮ್ ಪಟವರ್ಧನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್. ವಿ. ಜಿ. ಭಟ್ ಉಪಸ್ಥಿತರಿರುವರು.
ಸಭಾ ಕಾರ್ಯಕ್ರದ ನಂತರದಲ್ಲಿ ಪಂಡಿತ್ ಆರ್. ವಿ. ಹೆಗಡೆ, ಹಳ್ಳದಕ್ಕೆ ಇವರಿಂದ ಸಿತಾರ ವಾದನಕ್ಕೆ ಅನಂತ ಹೆಗಡೆ ವಾಜಗಾರ ತಬಲಾ ಸಾಥ್ ನೀಡುವರು.