ಶಿರಸಿ: ಯೂತ್ ಫಾರ್ ಸೇವಾ ಶಿರಸಿ, ಗೋ ಸೇವಾ ಗತಿವಿಧಿ ಶಿರಸಿ ವಿಭಾಗ, ಹಾಲು ಉತ್ಪಾದಕರ ಸಹಕಾರಿ ಸಂಘ ನಿ ಹೆಗಡೆಕಟ್ಟಾ, ಹೆಗಡೆಕಟ್ಟಾ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ, ಹೆಗಡೆಕಟ್ಟಾ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆ ಶಿರಸಿ ಇವರ ಸಂಯುಕ್ತಾಶ್ರಯದಲ್ಲಿ 2021-22 ನೇ ಸಾಲಿನ ಆತ್ಮ ಯೋಜನೆಯಡಿ ರೈತರರಿಗೆ ನ.20 ರಂದು ಬೆಳಿಗ್ಗೆ 9-30 ರಿಂದ ತಾಲೂಕಿನ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದಲ್ಲಿ ಹಸುಗಳಿಗೆ ‘ಹಸಿರು ಮದ್ದು- ಹಸಿರು ಮೇವು’ ಕಾರ್ಯಾಗಾರ ಮತ್ತು ಭಾರತೀಯ ಗೋತಳಿ ಪರಿಚಯ- ನಾಟಿವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಧಾರವಾಡ ಹಾಲು ಒಕ್ಕೂಟ, ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನಮನೆ ಉದ್ಘಾಟಕರಾಗಿ ಆಗಮಿಸುವರು. ಮುಖ್ಯ ಅತಿಥಿಗಳಾಗಿ ಆತ್ಮ ರೈತ ಸಲಹಾ ಸಮಿತಿಯ ಅಧ್ಯಕ್ಷ ಜಿ.ಆರ್ ಹೆಗಡೆ ಬೆಳ್ಳೆಕೆರಿ ಮತ್ತು ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎನ್.ಎಚ್. ಸವಣೂರು ಪಾಲ್ಗೊಳ್ಳುವರು. ಸೇವಾ ಸಹಕಾರಿ ಸಂಘ, ಹೆಗಡೆಕಟ್ಟಾ ಅಧ್ಯಕ್ಷ ಎಂ.ಪಿ ಹೆಗಡೆ ಅಧ್ಯಕ್ಷತೆ ವಹಿಸುವರು.
ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾಧ್ಯಾಪಕರು, ಪಶು ವೈದ್ಯಕೀಯ ಕಾಲೇಜ್ ಶಿವಮೊಗ್ಗ ಡಾ.ಎನ್.ಬಿ ಶ್ರೀಧರ ಅವರು ಹಸಿರು ಮೇವು ಕುರಿತು, ಪ್ರಾದೇಶಿಕ ಸಂಶೋಧನಾ ಕೇಂದ್ರ, ಪಶುವೈದ್ಯ ಡಾ. ಗಣೇಶ ಹೆಗಡೆ ನೀಲೇಸರ ಪಶುಗಳ ಕಾಯಿಲೆ ಹಾಗೂ ಹಸಿರು ಮದ್ದು ಕುರಿತು ದತ್ತಾತ್ರಯ ಭಟ್ಟ್ ಹುಬ್ಬಳ್ಳಿ ಪ್ರಶಿಕ್ಷಣ ಪ್ರಮುಖ, ಗೋಸೇವಾ ಗತಿವಿಧಿ ಉತ್ತರ ಪ್ರಾಂತ ಅವರು ಭಾರತೀಯ ಗೋತಳಿ ಕುರಿತು ಯೂತ್ ಫಾರ್ ಸೇವಾ ಶಿರಸಿ ಸಂಯೋಜಕ ಉಮಾಪತಿ ಭಟ್ಟ್ ಕೆವಿ ಅವರು ಭಾರತೀಯ ಸಂಸ್ಕøತಿಯಲ್ಲಿ ಹಸುವಿಗೆ ಹಸಿರು ಮದ್ದು ಮಾತನಾಡುವರು.
ಮಧ್ಯಾಹ್ನ 2-45 ರಿಂದ ಸಮಾರೋಪ ಸಮಾರಂಭ ನಡೆಯಲಿದೆ. ಹಾಲು ಉತ್ಪಾದಕರ ಸಹಕಾರಿ ಸಂಘ ನಿ ಹೆಗಡೆಕಟ್ಟಾ ಅಧ್ಯಕ್ಷ ಮಂಜುನಾಥ ಜಿ ಹೆಗಡೆ ಹೆಗಡೆಕೇರಿ ಅಧ್ಯಕ್ಷತೆ ವಹಿಸುವರು. ಕೂಡ್ಲಿಗಿ ತಾಲೂಕಿನ ಪ್ರಗತಿಪರ ಹೈನುಗಾರರು ವಿಶ್ವೇಶ್ವರ ಸಜ್ಜನ ಹುಲಿಕೆರೆ, ಮತ್ತು ಟಿ.ಆರ್ ಹೆಗಡೆ ಹೆಲ್ಲೆಕೊಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಕಾರ್ಯಕ್ರಮದಲ್ಲಿ ಪಶುಗಳಿಗೆ ವನಮೂಲಿಕೆ ಔಷಧ ನೀಡುವ ಪಾರಂಪರಿಕ ವೈದ್ಯರಾದ ದೇವನಳ್ಳಿಯ ಗೋವಿಂದ ಗೌಡ, ಬೀರಿನಜಡ್ಡಿ ಆನಂದ ನಾಯ್ಕ, ಬಂಡಲದ ಶೇಷಾ ಡಾಕು ಮರಾಠೆ, ಮಂಜುಗುಣಿಯ ಮಾದೇವ ಶಂಕರ ಭಂಡಾರಿ, ಟಿ.ಆರ್ ಹೆಗಡೆ ಹೆಲ್ಲೆಕೊಪ್ಪ ಅವರುಗಳಿಗೆ ಸನ್ಮಾನಿಸಲಾಗುವದು. ಇದೇ ಸಂದರ್ಭದಲ್ಲಿ `ಹಸುಗಳಿಗೆ ಹಸಿರು ಮದ್ದು’ ಕ್ಯಾಲೆಂಡರ್ ಬಿಡುಗಡೆ, ಗೋ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ, ಹಸಿರು ಮದ್ದು ಗಿಡಗಳ ಪ್ರದರ್ಶನ, ಪಶುವೈದ್ಯದ ಮಾಹಿತಿ ಪ್ರದರ್ಶನ, ಪಶುವೈದ್ಯದ ಪುಸ್ತಕ ಮಾರಾಟವಿರುತ್ತದೆ.
ಹೈನುಗಾರರು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘಟಕರ ಪರವಾಗಿ ಗೋ ಸೇವಾ ಗತಿವಿಧಿ ಶಿರಸಿ ವಿಭಾಗ ಪ್ರಮುಖ ವಿನಾಯಕ ಹೆಗಡೆ ಕಾನಳ್ಳಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.