ಯಲ್ಲಾಪುರ: ತಾಲೂಕಿನ ನಂದೊಳ್ಳಿ ಸಮೀಪದ ಗುಮ್ಮಾನಿಮನೆಯಲ್ಲಿ ದಿ.ಸೂರಾ ನಾಯ್ಕ ಸ್ಮರಣಾರ್ಥ ಸ್ಥಳೀಯ ಕಲಾವಿದರಿಂದ ಪಂಚವಟಿ-ಸೀತಾಪಹಾರ ಯಕ್ಷಗಾನ ತಾಳಮದ್ದಲೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ತಿಮ್ಮಣ್ಣ ಗಾಣಗದ್ದೆ, ಮಹಾಬಲೇಶ್ವರ ಭಟ್ ಬೆಳಶೇರ, ಗೋಪಾಲಕೃಷ್ಣ ಭಟ್ಟ ಮೊಟ್ಟೆಪಾಲ, ಮದ್ದಲೆವಾದಕರಾಗಿ ನಾಗಪ್ಪ ಕೋಮಾರ, ಚಂಡೆವಾದಕರಾಗಿ ನಾಗರಾಜ ಭಟ್ಟ ಕವಡಿಕೆರೆ ಭಾಗವಹಿಸಿದ್ದರು.
ರಾಮನಾಗಿ ರವೀಂದ್ರ ಭಟ್ಟ ವೈದಿಕರಮನೆ, ರಾವಣನಾಗಿ ಗಣಪತಿ ಭಾಗ್ವತ ಶಿಂಬಳಗಾರ, ಲಕ್ಷ್ಮಣನಾಗಿ ಗಣಪತಿ ಭಾಗ್ವತ ದೇವರಗದ್ದೆ, ಶೂರ್ಪನಖಿಯಾಗಿ ನರಸಿಂಹ ಭಟ್ಟ ಕುಂಕಿಮನೆ, ಮಂಡೋದರಿಯಾಗಿ ಎನ್.ಎಸ್.ಭಟ್ಟ, ಮಾರೀಚನಾಗಿ ಶ್ರೀಧರ ಭಟ್ಟ ಅಣಲಗಾರ, ಸೀತೆಯಾಗಿ ರಾಮಕೃಷ್ಣ ಭಟ್ಟ ಕಂಚನಗದ್ದೆ, ಋಷಿಯಾಗಿ ಮಾದೇವ ನಾಯ್ಕ ಕೊಲ್ಲಕ್ಕಿಪಾಲ ಪಾತ್ರ ಚಿತ್ರಣ ನೀಡಿದರು. ಸಂಘಟಕ ಮಂಜುನಾಥ ನಾಯ್ಕ ಕಲಾವಿದರನ್ನು ಗೌರವಿಸಿದರು. ಶಿವಾನಂದ ನಾಯ್ಕ ನಿರ್ವಹಿಸಿದರು