• first
    second
    third
    previous arrow
    next arrow
  • ಅಕಾಲಿಕ ಮಳೆ; ಬೆಳೆ ಹಾನಿ; ರೈತರ ಸಹಾಯಕ್ಕೆ ಧಾವಿಸಲು ಸರ್ಕಾರಕ್ಕೆ ಪ್ರಶಾಂತ ದೇಶಪಾಂಡೆ ಆಗ್ರಹ

    300x250 AD

    ಹಳಿಯಾಳ: ಕಳೆದ ಕೆಲವು ದಿನಗಳಿಂದ ಬೀಳುತ್ತಿರುವ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಯಾಗುತ್ತಿರುವದರಿಂದ ರೈತರಿಗೆ ತಾವು ಬೆಳೆದ ಭತ್ತ, ಗೋವಿನಜೋಳ, ಅಡಿಕೆ ಮುಂತಾದ ಬೆಳೆಗಳು ‘ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ’. ಈ ಕೂಡಲೇ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲು ಸರ್ಕಾರವು ಸಂಬಂಧಪಟ್ಟ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿ, ಸಂಕಷ್ಟದಲ್ಲಿದ್ದ ರೈತರಿಗೆ ನೆರವಾಗಬೇಕು ಎಂದು ಕೆ.ಪಿ.ಸಿ.ಸಿ ಸದಸ್ಯ, ಕಾಂಗ್ರೆಸ್ ಯುವ ಧುರೀಣ ಪ್ರಶಾಂತ ದೇಶಪಾಂಡೆ ಆಗ್ರಹಿಸಿದ್ದಾರೆ.

    ಈ ಕುರಿತು ಪತ್ರಿಕಾ ಪ್ರಕಟಣೆ ನೀಡೊರುವ ಅವರು, ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ, ಯಲ್ಲಾಪುರ, ಬನವಾಸಿ ಹಾಗೂ ಇನ್ನಿತರ ಭಾಗಗಳಲ್ಲಿ ಬಿದ್ದ ಭಾರೀ ಮಳೆಯಿಂದ ಕೊಯ್ಲೊತ್ತರ ಭತ್ತದ ಬೆಳೆಯು ನೀರಿನಲ್ಲಿ ಮುಳುಗಿದ್ದಲ್ಲದೇ, ಹಲವಾರು ಕಡೆಗಳಲ್ಲಿ ಕಟಾವು ಮಾಡಿದ ಭತ್ತವು ಕೊಚ್ಚಿಕೊಂಡು ಹೋಗಿದೆ. ಇನ್ನು ಕೆಲವು ಭಾಗಗಳಲ್ಲಿ ಕೊಯ್ಲು ಮಾಡದೇ ಇದ್ದ ಗೋವಿನ ಜೋಳ ಬೆಳೆಯು ಸಹ ಹಾಳಾಗಿದ್ದು ರೈತರಿಗೆ ತುಂಬಾ ನಷ್ಟವಾಗಿದೆ.

    ಬೆಳೆ ನಷ್ಟ ಪರಿಹಾರಕ್ಕಾಗಿ ರೈತರು ಅವಶ್ಯಕ ದಾಖಲೆಗಳೊಂದಿಗೆ ತಮಗೆ ಸಂಬಂಧಿಸಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಈ ಕೂಡಲೇ ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆಯಡಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಕೋರುತ್ತೇನೆ. ಅಲ್ಲದೇ,  ರಾಷ್ಟ್ರೀಯ  ಪ್ರಕೃತಿ ವಿಪತ್ತು ಪರಿಹಾರ ನಿಧಿಯಿಂದ ಸೂಕ್ತ ಪರಿಹಾರ ಒದಗಿಸಲು ಅನುಕೂಲವಾಗುವಂತೆ ಕೂಡಲೇ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲು ಸರ್ಕಾರವು ಸಂಬಂಧಪಟ್ಟ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿ, ಸಂಕಷ್ಟದಲ್ಲಿದ್ದ ರೈತರಿಗೆ ನೆರವಾಗಬೇಕಾಗಿದೆ.

    300x250 AD

    ವಿಮಾ ಕಂಪನಿಗಳು ಕೂಡ ಶೀಘ್ರವಾಗಿ ಪರಿಹಾರ ಪರಿವೀಕ್ಷಣಾ ತಂಡವನ್ನು ಕಳುಹಿಸಿ, ಪರಿಶೀಲನೆ ಮಾಡಬೇಕು. ಪುಡಿಗಾಸಿನ ಪರಿಹಾರ ಪರಿಪಾಠವನ್ನು ಬಿಟ್ಟು, ಹೃದಯವಂತಿಕೆಯನ್ನು ತೋರಿ, ಮಾರುಕಟ್ಟೆಯ ದರದಲ್ಲಿ ಪರಿಹಾರವನ್ನು ನೀಡಲು ಮುಂದೆ ಬರಬೇಕಾಗಿದೆ. ಆದ್ದರಿಂದ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ರೈತರ, ಬೆಳೆಗಾರರ ಹಿತ ಕಾಪಾಡಲು ಸರ್ಕಾರ ಮತ್ತು ಜಿಲ್ಲಾಡಳಿತವು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತೇನೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Attachments area

    Share This
    300x250 AD
    300x250 AD
    300x250 AD
    Back to top