ಶಿರಸಿ: ಹೆಗಡೆಕಟ್ಟಾ ಸೊಸೈಟಿ ಶತಮಾನೋತ್ಸವ ಸಂಭ್ರಮಾಚರಣೆ ಪ್ರಯುಕ್ತ ನ.21 ಭಾನುವಾರ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದೆ. ಆ ಮೂಲಕ ಶತಮಾನೋತ್ಸವ ಕಾರ್ಯಕ್ರಮಗಳು ಆರಂಭವಾಗಲಿವೆ. ಐ.ಎಂ.ಎ ಶಿರಸಿ, ಲಯನ್ಸ್ ಮತ್ತು ಲಯನೆಸ್ ಕ್ಲಬ್ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣೆ, ಮಧುಮೇಹ (ಸಕ್ಕರೆ ಕಾಯಿಲೆ) ರಕ್ತದೊತ್ತಡ (ಬಿ.ಪಿ), ಅಸ್ತಮಾ, ಚರ್ಮರೋಗ, ಎಲುಬು, ಮೂಳೆ, ಕಣ್ಣು, ಕಿವಿ ತಪಾಸಣೆ, ರೋಗ ತಪಾಸಣೆ ಮತ್ತು ಸಲಹಾ ಕಾರ್ಯಕ್ರಮ ಹಮ್ಮಿಕೊಂಡಿದೆ.
ರವಿವಾರ ಮುಂಜಾನೆ 9.30 ರಿಂದ ಮಧ್ಯಾಹ್ನ 1.30 ಘಂಟೆಯವರೆಗೆ ಹೆಗಡೆಕಟ್ಟಾ ಸೊಸೈಟಿ ಆವಾರದಲ್ಲಿ ತಪಾಸಣಾ ಶಿಬಿರ ನಡೆಯಲಿದ್ದು, ಶ್ರೀ ಗಜಾನನ ಸೆಕೆಂಡರಿ ಸ್ಕೂಲ್, ಹಿರಿಯ ಪ್ರಾಥಮಿಕ ಶಾಲೆ ಹೆಗಡೆಕಟ್ಟಾ, ಹಾಲು ಉತ್ಪಾದಕರ ಸಹಕಾರಿ ಸಂಘ ಹೆಗಡೆಕಟ್ಟಾ, ಸ್ವ ಸಹಾಯ ಸಂಘ, ವಿ.ವಿ ಕ್ಲಬ್, ಯುವಕ ಯುವತಿ ಮಂಡಳಿ ಹಾಗೂ ಹೆಗಡೆಕಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರ ಶಿಬಿರಕ್ಕೆ ಸಹಕಾರ ನೀಡಲಿವೆ.
ಡಾ. ರಾಮಾ ಹೆಗಡೆ ಸರ್ಜನ್, ಡಾ. ಜಿ.ಎಂ.ಹೆಗಡೆ ಸ್ತ್ರೀರೋಗ ತಜ್ಞರು ಡಾ. ಅರುಣ ಪ್ರಭು ಜನರಲ್ ಮೆಡಿಸಿನ್, ಡಾ. ದಿನೇಶ ಹೆಗಡೆ ಮಕ್ಕಳ ತಜ್ಞರು, ಡಾ. ರಾಯ್ಸದ್ ಸರ್ಜನ್, ಡಾ. ವಿನಾಯಕ ಎಸ್ ಕಿವಿ, ಮೂಗು, ಗಂಟಲು ತಜ್ಞರು, ಡಾ. ಐ.ಜಿ. ಧರ್ಮಶಾಲಾ ಆಯುರ್ವೇದ, ಡಾ. ಮಹೇಶ ಹೆಗಡೆ ಹೃದಯರೋಗ ತಜ್ಞರು, ಡಾ. ರವೀಂದ್ರ ಕೋಲ್ವೇಕರ್ ಕಣ್ಣಿನ ತಜ್ಞರು, ಡಾ. ವಿಶ್ವನಾಥ ಅಂಕದ ಕಣ್ಣಿನ ತಜ್ಞರು ಲಭ್ಯವಿರುತ್ತಾರೆ.
ಲಭ್ಯವಿರುವ ಔಷಧ ಉಚಿತ ನೀಡಲಾಗುವುದು, ಇ.ಸಿ.ಜಿ ವ್ಯವಸ್ಥೆ, ಮಧುಮೇಹ ಇರುವವರಿಗೆ ಸಕ್ಕರೆ ಪ್ರಮಾಣದ ಪರೀಕ್ಷೆ, ಅಸ್ತಮಾ ಇರುವವರಿಗೆ ಸ್ಪೈರೋ ಮೀಟರ ಮತ್ತು ಪೀಕ್ ಪ್ಲೋ ಮಾಸ್ಟರ್ ತಪಾಸಣೆ ಇದೆ. ಶಿಬಿರದ ಪ್ರಯೋಜನವನ್ನು ಸಂಘದ ಸದಸ್ಯರು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಹೆಗಡೆಕಟ್ಟಾ ಸೊಸೈಟಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.