ಶಿರಸಿ: ತಾಲೂಕಿನ ಇಸಳೂರು ಗ್ರಾಮ ಪಂಚಾಯತ ವ್ಯಾಪ್ತಿಯ ವಿವಿಧ ಕಾಮಗಾರಿಗಳನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಜ.11 ಸೋಮವಾರ ಉದ್ಘಾಟಿಸಿದರು.
ಇಸಳೂರು ಪಂಚಾಯತ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಹೊಸಳ್ಳಿ ಸೇತುವೆ ಕಾಮಗಾರಿ ಹಾಗೂ ಮೊಸರಗುಳಿ ಕಿರು ಸೇತುವೆ ನಿರ್ಮಾಣದ 30 ಲಕ್ಷ ರೂಪಾಯಿಗಳ ಕಾಮಗಾರಿಯನ್ನು ಉದ್ಘಾಟಿಸಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯಿಂದ 10 ಲಕ್ಷ ರೂಪಾಯಿ ಅನುದಾನದಲ್ಲಿ ಸುಧಾರಣೆಗೊಂಡ ಇಸಳೂರು ಊರೊಳಗಿನ ರಸ್ತೆ ಹಾಗೂ ಇಸಳೂರು ಗ್ರಾಮ ಪಂಚಾಯತದ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯೆ ಉಷಾ ಹೆಗಡೆ, ತಾಲೂಕಾ ಪಂಚಾಯತ ಉಪಾಧ್ಯಕ್ಷ ಚಂದ್ರು ಎಸಳೆ, ಹಾಗೂ ಬಿಜೆಪಿ ಗ್ರಾಮೀಣ ಮಂಡಲದ ಮಾಜಿ ಅಧ್ಯಕ್ಷ ಆರ್.ವಿ ಹೆಗಡೆ ಚಿಪಗಿ ಮತ್ತು ಗ್ರಾಮ ಪಂಚಾಯತ ಸದಸ್ಯರು ಲೋಕೋಪಯೋಗಿ ಮತ್ತು ಜಿಲ್ಲಾ ಪಂಚಾಯತ ಇಲಾಖೆಯ ಅಧಿಕಾರಿಗಳು ಹಾಗೂ ಊರ ನಾಗರೀಕರು ಉಪಸ್ಥಿತರಿದ್ದರು.
ಮತ್ತು ಅದೇ ದಿನ ಭೈರುಂಬೆ ಪಂಚಾಯತ ವ್ಯಾಪ್ತಿಯಲ್ಲಿ 40 ಲಕ್ಷ ರೂಪಾಯಿಗಳಲ್ಲಿ ಸುಧಾರಣೆಗೊಂಡ ಭೈರುಂಬೆ ಗಡಿಕೈ ರಸ್ತೆ ಹಾಗೂ 10 ಲಕ್ಷ ರೂಪಾಯಿಗಳಲ್ಲಿ ಸುಧಾರಣೆಗೊಂಡ ಗಡಿಗೆಹೊಳೆ ರಸ್ತೆ ಹಾಗೂ ಭೈರುಂಬೆ ಗ್ರಾಮ ಪಂಚಾಯತದ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಸದಸ್ಯರೂ ಬಿಜೆಪಿ ಶಿರಸಿ ಗ್ರಾಮೀಣ ಮಂಡಲದ ಅಧ್ಯಕ್ಷರಾದ ನರಸಿಂಹ ಹೆಗಡೆ ಬಕ್ಕಳ ಹಾಗೂ ಜಿಲ್ಲಾ ಪಂಚಾಯತ ಸದಸ್ಯರಾದ ಜಿ.ಎನ್ ಹೆಗಡೆ ಮುರೇಗಾರು, ಸದಾನಂದ ಭಟ್ ನಡಗೋಡ, ಹಾಗೂ ಭೈರುಂಬೆ ಗ್ರಾಮದ ಊರಿನ ನಾಗರೀಕರು ಹಾಗೂ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು.