ಕಾರವಾರ: ತೀವ್ರ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್ತಿನ ಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿ ಬಹುತೇಕ ಖಚಿತಗೊಂಡಿದ್ದು, ಮೂಲಗಳ ಪ್ರಕಾರ ಕಾರವಾರದ ಗಣಪತಿ ಉಳ್ವೇಕರ್ ಗೆ ಪಕ್ಷದಿಂದ ಅನುಮೋದನೆ ದೊರೆತಿದೆ ಎನ್ನಲಾಗಿದೆ.
ಹಿಂದಿನ ಅವಧಿಗೆ ಸ್ಪರ್ಧಿಸಿ ಕೆಲವೇ ಮತಗಳ ಅಂತರದಲ್ಲಿ ಗೆಲುವಿನಿಂದ ದೂರ ಉಳಿದಿದ್ದ ಉಳ್ವೇಕರ್ ಗೆ ಈ ಬಾರೀ ಪಕ್ಷದಿಂದ ಮತ್ತೆ ಅವಕಾಶ ನೀಡಲಾಗಿದೆ. ನ.18, ಗುರುವಾರ ಯಲ್ಲಾಪುರದಲ್ಲಿ ನಡೆಯುವ ಜನಸ್ವರಾಜ್ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪ ಪರಿಷತ್ ಚುನಾವಣೆಗೆ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಕಾದು ನೋಡಬೇಕಿದೆ.