ಭಟ್ಕಳ: ಬೈಕ್ ಮತ್ತು ಮಿನಿ ಲಾರಿ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಸಾಗರ ರಸ್ತೆಯಲ್ಲಿ ನಡೆದಿದೆ.
ಗಾಯಗೊಂಡ ಬೈಕ್ ಸವಾರನನ್ನು ಪವನ್ ಮರಾಠಿ (೨೯)ತಾಲೂಕಿನ ಅರುಕಿ ನಿವಾಸಿ ಎಂದು ತಿಳಿದು ಬಂದಿದೆ. ಭಟ್ಕಳದಿಂದ ತನ್ನ ಮನೆಗೆ ತೆರಳುವ ವೇಳೆ ಸಾಗರ ರಸ್ತೆಯ ಬಸ್ ಡಿಪೋ ಸಮೀಪ ಮುಂಭಾದಿಂದ ಬರುತ್ತಿದ್ದ ಮಿನಿ ಲಾರಿಗೆ ಬೈಕ್ ಸವಾರ ಡಿಕ್ಕಿ ಹೊಡೆದಿರುವ ಬಗ್ಗೆ ತಿಳಿದು ಬಂದಿದೆ.
ಡಿಕ್ಕಿ ರಭಸಕ್ಕೆ ಮಿನಿ ಲಾರಿ ರಸ್ತೆ ಪಕ್ಕದಲ್ಲಿ ಪಲ್ಟಿಯಾಗಿ ಬಿದಿದೆ. ಅಪಘಾತದಲ್ಲಿ ಪವನ್ ಮರಾಠಿ ಕೈಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ಘಟನೆ ನಡೆದ ತಕ್ಷಣ ಬೈಕ್ ಸವಾರನಿಗೆ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.