• first
    second
    third
    previous arrow
    next arrow
  • ಹೆದ್ದಾರಿ ಪಕ್ಕದ ಕೆರೆಗೆ ತಡೆಗೋಡೆಯಿಲ್ಲ; ಅಧಿಕಾರಿಗಳ ಕಾರ್ಯವೈಖರಿಗೆ ಸಾರ್ವಜನಿಕರ ಅಸಮಾಧಾನ

    300x250 AD

    ಯಲ್ಲಾಪುರ: ಪಟ್ಟಣದ ಹೊರವಲಯದಲ್ಲಿ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಕೆರೆಗೆ ತಡೆಗೋಡೆ ಇಲ್ಲದ ಕಾರಣ ಅಪಘಾತಗಳು ಸಂಭವಿಸುತಿದ್ದು, ಆದರೂ ಸಹಾ ತಡೆಗೋಡೆ ನಿರ್ಮಿಸದ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


    ಪಟ್ಟಣದ ಹೊರವಲಯದಲ್ಲಿ ಅಮ್ಮಾಜಿ ಕೆರೆಯಿದೆ. ಕೆರೆ ಒಡ್ಡಿಯಮೇಲೆ ಯಲ್ಲಾಪುರ ಹಾಗೂ ಕಲಘಟಗಿ ತಾಲೂಕಿಗೆ ಹೋಗುವ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಪ್ರತಿದಿನವೂ ಈ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇಲ್ಲಿ ಚಾಲಕ ಸ್ಪಲ್ಪ ಯಾಮಾರಿದರೂ ಅಪಘಾತ ಕಟ್ಟಿಟ್ಟ ಬುತ್ತಿ. ಕೆಲ ದಿನಗಳ ಹಿಂದೆ ಬೆಂಗಳೂರಿನಿಂದ ಬರುತ್ತಿದ್ದ ದಂಪತಿಗಳ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದು ಇಬ್ಬರೂ ಮೃತಪಟ್ಟ ಘಟನೆ ನಡೆದಿದೆ. ತಡೆಗೋಡೆ ಇದ್ದರೆ ಈ ದುರ್ಘಟನೆ ನಡೆಯುತ್ತಿರಲಿಲ್ಲ. ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

    300x250 AD

    ಇದಲ್ಲದೇ ಟಿಬೇಟಿಯನ್ ಕ್ಯಾಂಪ್ ನಿಂದ ಪ್ರಯಾಣಿಕರನ್ನು ತುಂಬಿಕೊಂಡು ಬರುತ್ತಿದ್ದ ಜೀಪು ಕೆರೆಗೆ ಬಿದ್ದ ಹತ್ತಾರು ಘಟನೆ ಸಾಕ್ಷಿ ಇದೆ. ಹಲವು ದ್ವಿಚಕ್ರ ವಾಹನಗಳೂ ಕೆರೆಗೆ ಬಿದ್ದ ಘಟನೆ ಕಣ್ಣೆದುರಲ್ಲೇ ಇದೆ. ಆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಕೆರೆ ದಂಡೆಗೆ ಬೇಲಿ ನಿರ್ಮಿಸಿಲ್ಲ. ಈಗಲಾದರೂ ಎಚ್ಚೆತ್ತು ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ

    Share This
    300x250 AD
    300x250 AD
    300x250 AD
    Back to top