ನವದೆಹಲಿ: ಜನವರಿ 6 ರಂದು ಮಹಾರಾಷ್ಟ್ರದಿಂದ ಗುಜರಾತ್‍ಗೆ ಸರಕು ರೈಲನ್ನು ಸಂಪೂರ್ಣ ಮಹಿಳಾ ಸಿಬ್ಬಂದಿ ಓಡಿಸಿದ್ದಾರೆ. ಇದು ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಮಹಿಳಾ ಸಿಬ್ಬಂದಿ ಚಲಾಯಿಸಿದ ಮೊದಲ ಸರಕು ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ವೆಸ್ಟರ್ನ್ ರೈಲ್ವೆ ವಲಯ ಈ ಬಗ್ಗೆ ಟ್ವೀಟ್ ಮಾಡಿದ್ದು, ಸಂಪೂರ್ಣ ಮಹಿಳಾ ಸಿಬ್ಬಂದಿಯನ್ನು ಒಳಗೊಂಡ ಪ್ರಾಯೋಗಿಕ ಸರಕು ರೈಲು ವಸೈ ರೋಡ್‍ನಿಂದ ವಡೋದರಾಕ್ಕೆ ಸಂಚಾರ ಆರಂಭಿಸಿದೆ ಎಂದು ಮಾಹಿತಿ ನೀಡಿದೆ.
ಸರಕು ರೈಲು ಓಡಿಸಿದ ಮೂವರು ಮಹಿಳೆಯರು ಲೊಕೊ ಪೈಲಟ್ ಕುಂಕುಮ್ ಸೂರಜ್ ಡೊಂಗ್ರೆ, ಸಹಾಯಕ ಲೊಕೊ ಪೈಲಟ್ ಉದಿತಾ ವರ್ಮಾ ಮತ್ತು ಗೂಡ್ಸ್ ಗಾರ್ಡ್ ಆಕಾಶಾ ರಾಯ್. ವೆಸ್ಟರ್ನ್ ರೈಲ್ವೆಯ ಮೊದಲ ಮಹಿಳಾ ಸಿಬ್ಬಂದಿ ಮಾನವಸಹಿತ ಸರಕುಗಳ ರೈಲನ್ನು ಓಡಿಸಿದ್ದು ಇದೇ ಮೊದಲು.
ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಟ್ವಿಟ್ ಮಾಡಿ, ಪಶ್ಚಿಮ ರೈಲ್ವೆ ಮತ್ತೊಂದು ಪರಂಪರೆಯನ್ನು ಮುರಿದು ಮಹಿಳಾ ಸಬಲೀಕರಣಕ್ಕೆ ಉದಾಹರಣೆ ನೀಡಿದೆ ಎಂದು ಶ್ಲಾಘಿಸಿದ್ದಾರೆ.