• Slide
  Slide
  Slide
  previous arrow
  next arrow
 • ಮುಂಗಡನಮನೆ ಸಹಕಾರಿ ಸಂಘದಲ್ಲಿ ಆರಕ್ಷಕರ ಜನಸಂಪರ್ಕ ಸಭೆ

  300x250 AD

  ಶಿರಸಿ: ಮುಂಡಗನಮನೆ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನ.16 ರಂದು ಆರಕ್ಷಕರ ಜನಸಂಪರ್ಕ ಸಭೆ ನಡೆಯಿತು.
  ಅಧ್ಯಕ್ಷತೆಯನ್ನು ಗೋಪಾಲಕೃಷ್ಣ ವೈದ್ಯರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆರಕ್ಷಕ ಇಲಾಖೆಯ ಎ.ಎಸ್.ಐ. ಎನ್.ಜಿ.ಶಿರಾಲಿ ಹಾಗೂ ಬೀಟ್ ಹವಾಲ್ದಾರ ಪೋಡಪ್ಪ ಹಟ್ಟಿಯವರು ಉಪಸ್ಥಿತರಿದ್ದರು.


  ಪ್ರಾಸ್ತಾವಿಕವಾಗಿ ಮಾತನಾಡಿದ ಗೋಪಾಲಕೃಷ್ಣ ವೈದ್ಯರು ಪ್ರಸ್ತುತವಾಗಿ ರೈತರಿಗೆ ಯೋಗ್ಯವಾದ ಅಡಿಕೆ ದರ ಬಂದಿದೆ. ಆದರೆ ಈ ಬೆಳೆಯನ್ನು ಕಳ್ಳಕಾಕರಿಂದ ಇಟ್ಟುಕೊಳ್ಳುವುದು ಕಷ್ಟ. ಕಾರಣ ಈ ನಿಟ್ಟಿನಲ್ಲಿ ನಮ್ಮ ಪ್ರಾಥಮಿಕ ಸಹಕಾರಿ ಸಂಘವು ನಮ್ಮ ಕಾರ್ಯಕ್ಷೇತ್ರದ ಎಲ್ಲಾ ರೈತರನ್ನು ಆರಕ್ಷಕ ಇಲಾಖೆಯೊಂದಿಗೆ ಮುಖಾಮುಖಿ ನಡೆಸಿ ರೈತರ ಸಂಕಷ್ಟ ದೂರ ಮಾಡಲು ನಾವು ಮುಂದಾಗಿದ್ದೇವೆ ಎಂದರು.


  ಸಭೆಯಲ್ಲಿ ಸಾರ್ವಜನಿಕರು ತಮ್ಮ-ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ವಾರದಲ್ಲಿ 2-3 ದಿನ ಪೋಲಿಸ್ ಗಸ್ತು ತಿರುಗಬೇಕೆಂದರು. ಕೆಲವರು ಊರಿನಲ್ಲಿ ಕದ್ದು ಅಡಿಕೆಯನ್ನು ಖರೀದಿಸುವವರ ಮೇಲೆ ಕ್ರಮ ಆಗಬೇಕೆಂದರು. ಅಲ್ಲದೇ ಮನೆಮನೆಗಳಲ್ಲಿ ಅವರು ಹೊಂದಿದ ಬಂದೂಕುಗಳಿದ್ದರೆ ಕಳ್ಳರಿಗೂ ಭಯ ಇರುತ್ತದೆ. ಅಲ್ಲದೇ ರೈತರಿಗೂ ನೂರಾನೆಯ ಧೈರ್ಯವಿರುತ್ತದೆ. ಕಾರಣ ಪೀಕು ರಕ್ಷಣೆಗಾಗಿ ನೀಡುವ ಬಂದೂಕನ್ನು ಚುನಾವಣಾ ವೇಳೆ ಅಥವಾ ಇತರ ವೇಳೆಯಲ್ಲಿ ಪೋಲಿಸ್ ಸ್ಟೇಶನ್‍ನಲ್ಲಿ ಡಿಪಾಸಿಟ್ ಮಾಡುವ ಪದ್ಧತಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಪೋಲಿಸ್ ಜಿಲ್ಲಾವರಿಷ್ಠಾಧಿಕಾರಿಗಳು ಕೈಬಿಡಬೇಕೆಂದು ಒಕ್ಕೊರಲಿನ ಬೇಡಿಕೆಯನ್ನು ಇಟ್ಟರು.

  300x250 AD


  ಪೋಲಿಸ್ ಅಧಿಕಾರಿ ಎನ್.ಜಿ.ಶಿರಾಲಿಯವರು ಮಾತನಾಡಿ ಗಸ್ತು ತಿರುಗುವ ಬಗ್ಗೆ ಮೇಲಾಧಿಕಾರಿಗಳಲ್ಲಿ ವಿನಂತಿಸಲಾಗುವುದು. ಅಲ್ಲದೇ ವಾರಕ್ಕೊಮ್ಮೆಯಾದರೂ ಪೋಲಿಸ್ ಗಸ್ತು ಬಗ್ಗೆ ಕ್ರಮಕೈಗೊಳ್ಳಲಾಗುವುದು, ಅಲ್ಲದೇ ಊರಿನಲ್ಲಿಯೇ ಕೆಲವರು ಗಸ್ತು ತಿರುಗುವುದನ್ನು ಪಾಳಿಯ ಪ್ರಕಾರ ಮಾಡಿದರೆ ಅಂತವರಿಗೆ ಗುರುತಿನ ಚೀಟಿಯನ್ನು ನೀಡಲಾಗುವುದೆಂದರು. ಅಲ್ಲದೇ ಸಂಶಯಾಸ್ಪದವಾಗಿ ಯಾರಾದರೂ ಓಡಾಡಿದ್ದಲ್ಲಿ 112 ಕ್ಕೆ ಸಾರ್ವಜನಿಕರು ಕರೆಮಾಡಿ ಹೇಳಬಹುದೆಂದರು. ಅಲ್ಲದೇ ಯಾರೂ ದೂರವಾಣಿ ಮೂಲಕ ನಿಮ್ಮ ಬ್ಯಾಂಕ್ ಖಾತೆ ವಿವರ ಕೇಳಿದರೆ ಕೊಡಬಾರದೆಂದರು.


  ಇದಕ್ಕೆ ಉತ್ತರಿಸಿದ ಗೋಪಾಲಕೃಷ್ಣ ವೈದ್ಯರವರು ನಮ್ಮ ಸಂಘದಿಂದಲೇ ಪ್ರತಿ ಗ್ರಾಮದಲ್ಲಿ ಸಾರ್ವಜನಿಕರ ಗಸ್ತುಪಡೆಯನ್ನು ನಿರ್ಮಿಸಲಾಗುವುದು. ಇವರ ಪೆಟ್ರೋಲ್ ಖರ್ಚಿನಂತಹ ಕನಿಷ್ಟ ಬೇಡಿಕೆಯನ್ನು ಸಂಘವೇ ನಿರ್ವಹಿಸುವುದೆಂದು ತಿಳಿಸಿದರು. ಇದನ್ನು ಸಭೆಯು ಕರತಾಡಿನ ಮೂಲಕ ಒಪ್ಪಿಗೆ ಸೂಚಿಸಿತು.


  ಸಭೆಯ ಪ್ರಾರಂಭಕ್ಕೆ ಸ್ವಾಗತಿಸಿದ ಮುಖ್ಯಕಾರ್ಯನಿರ್ವಾಹಕ ನಾಗಪತಿ ಭಟ್ಟ ನಿರ್ವಹಿಸಿದರು. ಮಾರುಕಟ್ಟೆ ಸಲಹೆಗಾರ ವಿ. ಆರ್. ಹೆಗಡೆ ಮತ್ತಿಘಟ್ಟ ವಂದನಾರ್ಪಣೆ ಸಲ್ಲಿಸಿದರು. ಸಭೆಯಲ್ಲಿ ಶ್ರೀಧರ ಹೆಗಡೆ ಗದ್ದೆಮನೆ, ನಾಗಪತಿ ಹೆಗಡೆ ಹೊಸ್ಕಟ್ಟು, ಎನ್.ವಿ.ವೈದ್ಯ, ಡಿ.ಆರ್.ಭಟ್ಟ, ರಾಘವೇಂದ್ರ ಹೆಗಡೆ, ಗಂಗಾಧರ ಭಟ್ಟ ಮುಂತಾದವರು ಚರ್ಚೆಯಲ್ಲಿ ಪಾಲ್ಗೊಂಡರು. ವೇದಿಕೆಯಲ್ಲಿ ಸಹಕಾರಿ ಸಂಘದ ಹಿರಿಯ ನಿರ್ದೇಶಕ ಸುಬ್ರಾಯ ಹೆಗಡೆ ಕಡೆತೋಟ ಹಾಗೂ ಸ್ಥಳೀಯ ಎಪಿಎಂಸಿ ನಿರ್ದೇಶಕ ಮಾರುತಿ ನಾಯ್ಕ ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top